ADVERTISEMENT

ಹನಿಟ್ರ್ಯಾಪ್‌: ಎಲ್ಲರ ಹೆಸರು ಬಯಲಾಗಲಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 6:22 IST
Last Updated 30 ಸೆಪ್ಟೆಂಬರ್ 2019, 6:22 IST
ಹನಿಟ್ರ್ಯಾಪ್
ಹನಿಟ್ರ್ಯಾಪ್   

ಮಧ್ಯಪ್ರದೇಶದ ಹನಿಟ್ರ್ಯಾಪ್ ಲೈಂಗಿಕ ಹಗರಣದ ಜೊತೆ ರಾಜಕಾರಣಿಗಳು, ಅಧಿಕಾರಿಗಳ ಹೆಸರುಗಳು ತಳಕು ಹಾಕಿಕೊಂಡಿವೆ (ಪ್ರ.ವಾ., ಸೆ.28). ಈ ಸಂಬಂಧ ವಶಪಡಿಸಿಕೊಳ್ಳಲಾದ ವಿಡಿಯೊಗಳಲ್ಲಿ ಇದಕ್ಕೆ ಬೇಕಾದ ಪುರಾವೆಗಳಿವೆ ಎಂಬ ಸುದ್ದಿ ಇದೆ. ಆದರೆ, ಎಲ್ಲವೂ ಅಂತೆಕಂತೆ ರೂಪದಲ್ಲಿಯೇ ಹರಿದಾಡುತ್ತಿವೆ. ಹೆಸರು
ಬಹಿರಂಗಪಡಿಸಲು ಏನು ಅಡ್ಡಿ? ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಮಾಡಿದ್ದರೆ ಕ್ರಮಕ್ಕೆ ಒಳಪಡಿಸಬೇಕು ಮತ್ತು ಶಿಕ್ಷೆ ವಿಧಿಸಲೇಬೇಕು. ಬ್ಲ್ಯಾಕ್‌ಮೇಲ್‍ನಿಂದ ಹಣ ವಸೂಲಿ ಮಾಡುವ ಗುಂಪುಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ.

-ಪ್ರದೀಪ್ ಕುಮಾರ ಬಿ.ಆರ್.,ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT