ADVERTISEMENT

ಹಾಪ್‌ಕಾಮ್ಸ್‌: ಅವ್ಯವಸ್ಥೆ ಸರಿಪಡಿಸಲಾಗದೇ?

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:07 IST
Last Updated 12 ನವೆಂಬರ್ 2019, 19:07 IST

ರಾಜ್ಯದ ಹಾಪ್‌ಕಾಮ್ಸ್‌ನಲ್ಲಿನ ಅವ್ಯವಸ್ಥೆಯನ್ನು ‘ಒಳನೋಟ’ (ಪ್ರ.ವಾ., ನ. 10) ತೆರೆದಿಟ್ಟಿದೆ. ನಾನು ಸುಮಾರು 20 ವರ್ಷಗಳಿಂದ ಹಾಪ್‌ಕಾಮ್ಸ್‌ನ ಗ್ರಾಹಕ. ಅಲ್ಲಿನ ಪ್ರಮುಖ ಸಮಸ್ಯೆಗಳೆಂದರೆ ಭ್ರಷ್ಟಾಚಾರ, ತೂಕದಲ್ಲಿ ಮೋಸ, ದರಪಟ್ಟಿ ಹಾಕುವುದಿಲ್ಲ, ಬಿಲ್ ಕೊಡುವುದಿಲ್ಲ. ಇವನ್ನೆಲ್ಲ ಪ್ರಶ್ನಿಸಿದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಅದೊಂದು ಮಾಫಿಯಾ. ಈ ವ್ಯವಸ್ಥೆಯನ್ನು ಸರಿಪಡಿಸಲಾಗದೇ?
-ರುದ್ರೇಶ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.