ADVERTISEMENT

‘ಧರ್ಮದೇಟು’: ಕಡಿವಾಣ ಬೀಳಲಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST

ರಾಜ್ಯದಲ್ಲಿ ಇತ್ತೀಚೆಗೆ ಧರ್ಮದೇಟಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಕಿಗೆ ತುಪ್ಪ ಸುರಿಯುವಂತೆಮಾಧ್ಯಮಗಳಲ್ಲೂ ಅವುಗಳಿಗೆ ವ್ಯಾಪಕವಾಗಿ ಪ್ರಚಾರ ಸಿಗುತ್ತಿರುವುದು ದುರದೃಷ್ಟಕರ. ಇದಕ್ಕೆ ಉದಾಹರಣೆ, ಮಡಿಕೇರಿಯಲ್ಲಿ ಇತ್ತೀಚೆಗೆ ನಟ ‘ಹುಚ್ಚ’ ವೆಂಕಟ್‍ ಅವರ ಅನುಚಿತ ವರ್ತನೆ ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಸಾರ್ವಜನಿಕರಿಂದ ಆತನಿಗೆ ಬಿದ್ದ ಧರ್ಮದೇಟಿನ ಉತ್ತರ. ವೆಂಕಟ್‍ ವರ್ತನೆ ಹೇಗೇ ಇರಲಿ, ಅಲ್ಲಿ ಸೇರಿದ್ದ ಸಾರ್ವಜನಿಕರು ಅಥವಾ ಮಾಧ್ಯಮದವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವಲ್ಲಿ ವಿಫಲರಾಗಿದ್ದು ದುರದೃಷ್ಟಕರ.

ಇನ್ನು ಕಾನೂನಿನ ಪಾಲನೆ ಮಾಡಬೇಕಾದ ಪೊಲೀಸರು ಸಹ ಎಲ್ಲಾ ಮುಗಿದ ಮೇಲೆ ಬಂದು, ಇದೊಂದು ಸಿನಿಮಾ ಶೂಟಿಂಗ್ ಎಂದು ತಾವು ಭಾವಿಸಿದ್ದರಿಂದ ತಡೆಯಲಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಟಿ.ವಿ ಮಾಧ್ಯಮದವರಂತೂ ತಮ್ಮ ವಾಹಿನಿಗಳಲ್ಲಿ ಈ ಪ್ರಸಂಗವನ್ನು ವೈಭವೀಕರಿಸಿ ಅದಕ್ಕೆ ‘ಹೊಡಿ ಮಗ- ಹೊಡಿ ಮಗ, ಬಿಸಿ ಬಿಸಿ ಕಜ್ಜಾಯ...’ ಮುಂತಾದ ಸಿನಿಮಾ ಗೀತೆಗಳನ್ನು ಸೇರಿಸಿ ರೋಚಕವಾಗಿ ಬಿತ್ತರಿಸಿದ್ದು ಆಘಾತಕಾರಿ. ವೆಂಕಟ್ ಒಬ್ಬ ಮಾನಸಿಕ ಅಸ್ವಸ್ಥ. ಆತನಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡು, ಸರಿದಾರಿಗೆ ತರಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಈ ರೀತಿಯ ಧರ್ಮದೇಟಿನಪ್ರಕರಣಗಳಿಗೆ ಇನ್ನಾದರೂ ಕಟ್ಟುನಿಟ್ಟಿನ ಕಡಿವಾಣ ಬೀಳಬೇಕಾಗಿದೆ.

- ಬಿ.ಎಸ್.ಮನೋಹರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.