ADVERTISEMENT

ವಾಚಕರ ವಾಣಿ | ಅಕ್ರಮಕ್ಕೆ ಅವಕಾಶ: ಏನು ಶಿಕ್ಷೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮೇ 2022, 19:30 IST
Last Updated 20 ಮೇ 2022, 19:30 IST

‘ರಾಜಕಾಲುವೆಯ ಮೇಲೆ ಮನೆಗಳನ್ನು ಕಟ್ಟಿದ್ದಾರೆ, ಅವನ್ನು ತೆರವುಗೊಳಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಅದೆಲ್ಲ ಸರಿ, ಒಂದು ಮನೆಯನ್ನು ವಾರಗಳಲ್ಲಿ ಕಟ್ಟುವುದು ಸಾಧ್ಯವಿಲ್ಲ. ಮಹಡಿ ಮನೆಗಳನ್ನು ಕಟ್ಟಲಿಕ್ಕಂತೂ ವರ್ಷ ಬೇಕು. ಹೀಗಿರುವಾಗ, ಅಕ್ರಮ ನಿರ್ಮಾಣ ಕಾರ್ಯ ನಡೆಯದಂತೆ ನೋಡಿಕೊಳ್ಳಲು ಆ ಪ್ರದೇಶಕ್ಕೊಬ್ಬ ಸರ್ಕಾರಿ ಅಧಿಕಾರಿ ಇರುತ್ತಾನಲ್ಲ, ಅವ ಏನು ಮಾಡುತ್ತಿದ್ದ? ಕರ್ತವ್ಯಲೋಪ ಎಸಗಿದ ಅಥವಾ ಲಂಚ ಪಡೆದು ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಆತನಿಗೆ ಏನು ಶಿಕ್ಷೆ? ಅಕ್ರಮಗಳಿಗೆ ಅವಕಾಶ ಮಾಡಿಕೊಡುವವರಿಗೆ ಕಠಿಣ ಶಿಕ್ಷೆ ಕೊಟ್ಟರೆ ಇತರ ಅಧಿಕಾರಿಗಳಿಗೆ ಅದು ಒಂದು ಪಾಠವಾಗಿ, ಮುಂದೆ ಅಕ್ರಮ ನಿರ್ಮಾಣ ಚಟುವಟಿಕೆಗಳೇ ನಿಂತುಹೋಗುವುದಿಲ್ಲವೇ?

–ಶ್ರೀನಿವಾಸ ಕಾರ್ಕಳ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT