ADVERTISEMENT

ಅಕ್ರಮ ಪಡಿತರ ಚೀಟಿ: ವೋಟಿನ ಮಹಿಮೆ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಸೆಪ್ಟೆಂಬರ್ 2022, 19:31 IST
Last Updated 11 ಸೆಪ್ಟೆಂಬರ್ 2022, 19:31 IST

ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಇರಿಸಿಕೊಂಡಿರುವ, ಯೆಲ್ಲೋ ಬೋರ್ಡ್ ಅಲ್ಲದ ನಾಲ್ಕು ಚಕ್ರದ ವಾಹನ ಹೊಂದಿರುವವರು ತಕ್ಷಣ ಕಾರ್ಡನ್ನು ವಾಪಸ್‌ ಮಾಡಿ ದಂಡ ಕಟ್ಟಬೇಕೆಂದೂ ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಆಹಾರ ಇಲಾಖೆಯಿಂದ ಇತ್ತೀಚೆಗೆ ನೋಟಿಸ್ ಹೋಯಿತು. ಕೆಲವರು ಹೆದರಿ ತಮ್ಮ ಪಡಿತರ ಚೀಟಿಗಳನ್ನು ಒಪ್ಪಿಸಿ ದಂಡ ಕಟ್ಟಿ ಬಂದರು. ಅವರದು ಎಪಿಎಲ್ ಕಾರ್ಡ್‌ ಆಗಿ ಪರಿವರ್ತನೆಯೂ ಆಯಿತು.

ಆದರೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಈ ಉಪಕ್ರಮವು ಹೆದರಿಕೆ ಮೂಡಿಸಿದ ಕಾರಣ, ‘ನೀವು ಕಾರ್ಡುಗಳನ್ನು ಸದ್ಯಕ್ಕೇನೂ ಹಿಂದಿರುಗಿಸಬೇಕಾಗಿಲ್ಲ’ ಎಂದು ಅಕ್ರಮ ಬಿಪಿಎಲ್ ಕಾರ್ಡ್‌ದಾರರಿಗೆ ಅಭಯ ನೀಡಿದ್ದಾರೆ. ಎಲ್ಲವೂ ವೋಟಿನ ಮಹಿಮೆ!

⇒ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರ್, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.