ADVERTISEMENT

ವಾಚಕರ ವಾಣಿ | ಸಂಭ್ರಮದ ಜೊತೆ ಅವಲೋಕನ ಆಗಲಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 19:04 IST
Last Updated 15 ಆಗಸ್ಟ್ 2022, 19:04 IST

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಇದು ಸರಿಯಾದುದು. ಇದೇ ವೇಳೆ, ನಡೆದುಬಂದ ಹಾದಿಯ ಬಗೆಗೆ, ಸಾಧನೆಗಳ ಬಗೆಗೆ, ಸಮಸ್ಯೆಗಳ ಬಗೆಗೆ ವಸ್ತುನಿಷ್ಠವಾಗಿ ಅವಲೋಕನ ಆಗಬೇಕಾದುದು ಕೂಡ ಅಷ್ಟೇ ಅಗತ್ಯ. ಎಡವಿದ್ದು ಎಲ್ಲಿ ಎಂಬುದು ಗೊತ್ತಾದರೆ ತಿದ್ದಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿಗೆ ವಸ್ತುಸ್ಥಿತಿಯನ್ನು ಎಲ್ಲರ ಮುಂದಿಡುವುದು ಯುಕ್ತವಾದುದು.

ಅಪೌಷ್ಟಿಕತೆಯು ಮಕ್ಕಳನ್ನು ಬಹಳವಾಗಿ ಕಾಡುತ್ತಿದೆ. ಅದರ ನಿವಾರಣೆಗೆ ಹಲವಾರು ಉಪಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಅದರ ಫಲಾಫಲಗಳ ಬಗೆಗೆ ಆತ್ಮಾವಲೋಕನ ಆಗಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ, ಉದ್ಯೋಗ ಅವಕಾಶಗಳ ಸೃಷ್ಟಿಯ ಸ್ಥಿತಿಗತಿ ಹೇಗಿದೆ, ಕೃಷಿ ಕ್ಷೇತ್ರದಲ್ಲಿ ಚೇತರಿಕೆ ಕಂಡುಬಂದಿದೆಯೇ ಇವೇ ಮುಂತಾದ ವಿಷಯಗಳ ಬಗೆಗೆ ಗಂಭೀರ ಚರ್ಚೆಗಳಾಗಬೇಕು. ಅದರ ಆಧಾರದ ಮೇಲೆ ಆದ್ಯತೆಗಳನ್ನು ಗುರುತಿಸಬೇಕು. ಅದಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಆಗಬೇಕು.

–ಚಂದ್ರಿಕಾ ಕೆ.,ನೆಲಮಂಗಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.