ADVERTISEMENT

ಆರ್ಥಿಕತೆ ಚೇತರಿಕೆಗೆ ಪೂರಕ ಕ್ರಮ ಕೈಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 16:44 IST
Last Updated 7 ಸೆಪ್ಟೆಂಬರ್ 2020, 16:44 IST

ಬಲಿಷ್ಠ ಆರ್ಥಿಕತೆ ಹೊಂದಿರುವ ಜಗತ್ತಿನ ಯಾವುದೇ ದೇಶವೂ ಕೇವಲ ಆ್ಯಪ್‍ಗಳನ್ನು ನಿರ್ಬಂಧಿಸಿ ಶ್ರೀಮಂತಗೊಂಡ ಉದಾಹರಣೆಗಳಿಲ್ಲ. ‘ಬಳಸಿ ಬಿಸಾಡುವ’ ಇಂದಿನ ಚೀನೀ ಉತ್ಪನ್ನಗಳಂತೆಯೇ 1950ರಲ್ಲಿ ಜಪಾನಿ ವಸ್ತುಗಳನ್ನು ಜನ ಸಂಶಯದಿಂದ ನೋಡುತ್ತಿದ್ದರು. ನೂರು ವರ್ಷಕ್ಕೂ ಮಿಗಿಲಾದ ವಾಹನ ತಯಾರಕಾ ಕಂಪನಿಗಳಿಂದ ಇಂದಿನ ಜರ್ಮನಿ ಸರ್ವಶ್ರೇಷ್ಠ ವಾಹನ ಉತ್ಪಾದಕ ಸ್ಥಾನದಲ್ಲಿದೆ. ಅಂತೆಯೇ ಇಂಗ್ಲೆಂಡ್, ಯುರೋಪ್ ದೇಶಗಳು ಬಟ್ಟೆಯಿಂದಿಡಿದು ಗಡಿಯಾರದವರೆಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಉತ್ಕೃಷ್ಟ ತಯಾರಿಕಾ ದೇಶಗಳಾಗಿ ಹೊರಹೊಮ್ಮಿವೆ.

ನೆರೆಯ ದೇಶದೊಂದಿಗೆ ಆರ್ಥಿಕ ಸಮರ ನಡೆಸುವುದೇ ಆದರೆ, ಅದಕ್ಕೆ ಪರ್ಯಾಯ ಸೃಷ್ಟಿಯೇ ಮಾರ್ಗ. ಇದರಿಂದ ಮತ್ತೊಂದಷ್ಟು ಉದ್ಯೋಗ ಸೃಷ್ಟಿಗೆ ಅನುವಾಗುತ್ತದೆ. ಭಾರತದಲ್ಲಿ ಇತ್ತೀಚೆಗೆ ಬ್ಯಾನ್ ಆದ ಪಬ್‌ಜಿ ಗೇಮಿಂಗ್ ತಂತ್ರಾಂಶವನ್ನು ಜಪಾನ್‍ನ ಕಂಪನಿ ಖರೀದಿಸಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಅಂದರೆ, ಅದೇ ಆ್ಯಪ್ ಇನ್ನೊಂದು ಹಾದಿಯಲ್ಲಿ ನಮ್ಮ ಮೊಬೈಲ್‍ಗೆ ಹಿಂದಿರುಗುತ್ತದೆ ಎಂದಾಯಿತು. ಪ್ರಸ್ತುತ ಸಂದರ್ಭದಲ್ಲಿ ತಯಾರಿಕಾ- ಸೇವಾ ಕ್ಷೇತ್ರಗಳು ಮಾತ್ರ ಇಂದಿನ ಉದ್ಯೋಗದ ಮೂಲ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಕೋವಿಡ್–19ರ ಹೊಡೆತದಿಂದ ಬೇಸತ್ತ ಜನರಿಗೆ ಇರುವ ಉದ್ಯೋಗದ ಅವಶ್ಯಕತೆಗೆ ಪೂರಕವಾಗಿ ಸರ್ಕಾರವು ತ್ವರಿತ ಕ್ರಮಗಳನ್ನು ಕೈಗೊಳ್ಳಲಿ.

ಶಾಂತರಾಜು ಎಸ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.