ಅಂಚೆ ಸೇವೆಗೆ ಸಂಬಂಧಿಸಿದ ದೂರು, ಕುಂದುಕೊರತೆ ಬಗೆಹರಿಸಲು ಅಂಚೆ ಇಲಾಖೆಯು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಅಂಚೆ ಅದಾಲತ್‌ಗೆ ಒಬ್ಬ ಗ್ರಾಹಕರೂ ಹಾಜರಾಗಲಿಲ್ಲ ಎಂದು ವರದಿಯಾಗಿದೆ (ಪ್ರ.ವಾ., ಡಿ. 3). ನಾನು ಒಂದು ಬಾರಿ ಅಂಚೆ ಕಚೇರಿಗೆ ಹೋಗಿ ಅಂಚೆ ಎಂಐಎಸ್‌ನಲ್ಲಿ ಹಣ ತೊಡಗಿಸಲು ಚೆಕ್ ನೀಡಿದಾಗ, ಏನೇನೋ ಅಸಂಬದ್ಧ ಕಾರಣ ಹೇಳಿ ಸ್ವೀಕರಿಸಲಿಲ್ಲ. ಅದೇ ಹಣವನ್ನು ಬೇರೆ ಬ್ಯಾಂಕ್‌ನಲ್ಲಿ ತೊಡಗಿಸಿದೆ. ಇದೊಂದು ಸಣ್ಣ ಉದಾಹರಣೆ ಅಷ್ಟೆ.
ಈ ಸ್ಪರ್ಧಾತ್ಮಕ ಕಾಲದಲ್ಲಿ ಅಂಚೆ ಇಲಾಖೆಯು ಗ್ರಾಹಕಸ್ನೇಹಿ ಆಗುವ ನಿಟ್ಟಿನಲ್ಲಿ ನಿರೀಕ್ಷಿಸಿದಷ್ಟು ಪ್ರಯತ್ನವನ್ನೇ ಮಾಡುತ್ತಿಲ್ಲ. ಇಲಾಖೆಯ ಸೇವೆಗಳಿಂದ ದೂರವಾಗುತ್ತಿರುವ ಗ್ರಾಹಕರು ಇನ್ನು ದೂರು ಕೊಡುವ ಮಾತೆಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.