ADVERTISEMENT

ವಾಚಕರ ವಾಣಿ: ಮತ್ತೆ ಸಿಗಲಿ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 19:45 IST
Last Updated 17 ಮೇ 2022, 19:45 IST

ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರದ್ದು ಮಾಡಿದ್ದರಿಂದ ರೈಲ್ವೆ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ₹ 1,500 ಕೋಟಿ ಹೆಚ್ಚುವರಿ ಆದಾಯ ಗಳಿಸಿದೆ ಎಂಬ ಸುದ್ದಿ(ಪ್ರ.ವಾ., ಮೇ 17) ಓದಿ ಒಂದು ಕ್ಷಣ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಒಂದೆಡೆ, ಜನಪ್ರತಿನಿಧಿಗಳು ಅಪರೂಪದ ಒಗ್ಗಟ್ಟನ್ನು ಪ್ರದರ್ಶಿಸಿ ತಮ್ಮ ವೇತನ ಮತ್ತು ಇತರ ಭತ್ಯೆಗಳನ್ನು ಯಾವುದೇ ಚರ್ಚೆ ಇಲ್ಲದೆ ಏರಿಸಿಕೊಳ್ಳುತ್ತಾರೆ. ಆಗ ಕೋವಿಡ್ ಅಡ್ಡ ಬರುವುದಿಲ್ಲ. ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿಯನ್ನು 2020ರ ಮಾರ್ಚ್‌ 20ರಿಂದಲೇ ರದ್ದುಪಡಿಸಲಾಗಿದ್ದು, ಈ ರಿಯಾಯಿತಿಯನ್ನು ಪುನರ್‌ಸ್ಥಾಪಿಸಲು ಒಬ್ಬರೂ ರೈಲ್ವೆ ಇಲಾಖೆಗೆ ಹೇಳದೆ ಜಾಣ ಮೂಕರಾಗುತ್ತಾರೆ.

ಈಗಂತೂ, ಕೋವಿಡ್ ನಿಯಂತ್ರಣದಲ್ಲಿದೆ. ಕೇಂದ್ರವು ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಪುನಃ ಘೋಷಿಸಿ, ಹಿರಿಯ ನಾಗರಿಕರ ಭಾವನೆಗಳನ್ನು ಗೌರವಿಸುವ ವಿಷಯದಲ್ಲಿ ಬದ್ಧತೆ ತೋರಲಿ.

–ವೆಂಕಟೇಶ ಮುದಗಲ್, ಕಲಬುರಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.