ADVERTISEMENT

ಹಾಸ್ಯಾಸ್ಪದ ನಿಲುವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 20:17 IST
Last Updated 3 ಮಾರ್ಚ್ 2019, 20:17 IST

ಭಾರತದ ಜೊತೆಗಿನ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ತಮ್ಮ ಪ್ರಧಾನಿ ಇಮ್ರಾನ್‌ ಖಾನ್‌ ಅವರು ನಡೆಸಿದ ಪ್ರಯತ್ನಕ್ಕಾಗಿ ಅವರ ಹೆಸರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂದು ಪಾಕಿಸ್ತಾನದ ಸಂಸತ್ತಿನಲ್ಲಿ ನಿರ್ಣಯ ಮಂಡನೆಯಾಗಿದೆ (ಪ್ರ.ವಾ., ಮಾರ್ಚ್‌ 3). ಪಾಕಿಸ್ತಾನದ ಸಂಸದರ ಈ ಬೇಡಿಕೆ ಅಪಹಾಸ್ಯದಿಂದ ಕೂಡಿದೆ.

ಪಾಕಿಸ್ತಾನವು ಉಗ್ರವಾದವನ್ನು ಪ್ರತಿಪಾದಿಸುವ ರಾಷ್ಟ್ರ. ಜಗತ್ತಿನಲ್ಲಿಯೇ ಅತಿ ಹೆಚ್ಚು ಉಗ್ರ ಸಂಘಟನೆಗಳನ್ನು ಹೊಂದಿರುವ ಅಪಖ್ಯಾತಿ ಅದಕ್ಕಿದೆ. ಅಂತಹುದರಲ್ಲಿ ಆ ರಾಷ್ಟ್ರದ ಪ್ರಧಾನಿಯೊಬ್ಬರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟರೆ ಆ ಪ್ರಶಸ್ತಿಯ ಗೌರವವಾದರೂ ಉಳಿದೀತೇ?

ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.