ADVERTISEMENT

ಅಸಂಬದ್ಧ ಗೀತೆಗಳಿಗೆ ಬೀಳಲಿ ಕತ್ತರಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 19:30 IST
Last Updated 17 ಜೂನ್ 2021, 19:30 IST

ಕೆಟ್ಟ ಅಭಿರುಚಿಯ ಸಿನಿಮಾ ಗೀತೆಗಳ ಕುರಿತು ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಬರೆದಿರುವ ಲೇಖನ (ಸಂಗತ, ಮೇ 28) ತುಂಬ ಅರ್ಥಪೂರ್ಣವೂ ಔಚಿತ್ಯಪೂರ್ಣವೂ ಆಗಿದೆ. ನಮ್ಮ ಸಾಂಸ್ಕೃತಿಕ ರಾಯಭಾರಿಗಳೂ ಅಭಿರುಚಿಯ ನಿರ್ಮಾತೃಗಳೂ ಆಗಿರುವ ಗೀತ ರಚನಕಾರರು ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜವಾಬ್ದಾರಿಯನ್ನು ಅರಿತು ಉತ್ತಮ ಗೀತೆಗಳನ್ನು ರಚಿಸುವುದು ತುಂಬ ಅಗತ್ಯ. ಆದರೆ ಈಗ ಬರುತ್ತಿರುವ ಸಿನಿಮಾ ಗೀತೆಗಳು ಪ್ರಚೋದನಕಾರಿಯೂ ಹಿಂಸೆಯನ್ನು ವೈಭವೀಕರಿಸುವಂತೆಯೂ ಇದ್ದು, ಯುವಜನರ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತವೆ.

ಸಿನಿಮಾ ಸೆನ್ಸಾರ್‌ ಮಂಡಳಿಯು ಅಶ್ಲೀಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಅಶ್ಲೀಲ ಹಾಗೂ ಅಸಂಬದ್ಧವಾದ ಗೀತೆಗಳಿಗೂ ಕತ್ತರಿ ಹಾಕುವುದು ಒಳ್ಳೆಯದು. ಆಗ ಮಾತ್ರವೇ ಪ್ರಯೋಗದ ಹೆಸರಿನಲ್ಲಿ ಹಾಗೂ ಮನರಂಜನೆಯ ನೆಪದಲ್ಲಿ ಕೀಳು ಅಭಿರುಚಿಯ ಗೀತೆಗಳು ಪ್ರಸಾರವಾಗುವುದನ್ನು ತಡೆಗಟ್ಟಬಹುದು.

– ಡಾ. ಲತಾ ರಾಜಶೇಖರ್‌, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.