ADVERTISEMENT

ಹಾಲಿನ ಅಭಿಷೇಕ: ದೇವರು ಮೆಚ್ಚುವನೇ?

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:15 IST
Last Updated 10 ಡಿಸೆಂಬರ್ 2019, 20:15 IST

ಬೆಂಗಳೂರಿನ ಬ್ಯಾಟರಾಯನಪುರದ ಗುಂಡಾಂಜನೇಯ ದೇವಸ್ಥಾನದಲ್ಲಿ ಹನುಮಾನ್ ಜಯಂತಿಯ ಪ್ರಯುಕ್ತ ಉತ್ಸವ ಮೂರ್ತಿಗೆ 1,008 ಲೀಟರ್ ಹಾಲಿನಿಂದ ಅಭಿಷೇಕ ನೆರವೇರಿಸಿರುವುದನ್ನು ತಿಳಿದು (ಪ್ರ.ವಾ., ಡಿ. 10) ಬಹಳ ಬೇಸರವಾಯಿತು. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಅತಿಕಳಪೆ ಮಟ್ಟದ ರ‍್ಯಾಂಕಿಂಗ್ ಪಡೆದಿದೆ. ದೇಶದ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಅಗಾಧವಾಗಿದೆ. ಹೀಗಿರುವಾಗ, ಅತ್ಯಮೂಲ್ಯ ಸಂಪನ್ಮೂಲವಾದ ಹಾಲನ್ನು ಅಭಿಷೇಕ ಮಾಡಿ ವ್ಯರ್ಥ ಮಾಡುವುದು ಸರಿಯೇ? ಅದರ ಬದಲು, ದೇವರ ಹೆಸರಿನಲ್ಲಿ ಬಡವರಿಗೆ ದಾನ ಮಾಡಬಹುದಿತ್ತಲ್ಲವೇ ಎನಿಸಿತು. ಹಾಗೆ ಮಾಡದೆ, ಅಭಿಷೇಕದ ಹೆಸರಲ್ಲಿ ವ್ಯರ್ಥ ಮಾಡಿದರೆ ದೇವರು ಮೆಚ್ಚುವನೇ ಅಥವಾ ನಮ್ಮ ಭಕ್ತಿ ಮತ್ತು ಪೂಜೆ ತೋರಿಕೆಗೆ ಮಾತ್ರವೇ?

ಮಂಜುನಾಥ ನಾಯ್ಕ ಎಸ್., ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT