ADVERTISEMENT

ರಾಜಕಾರಣಿಗಳ ಈ ಆಕ್ಷೇಪ ತರವೇ?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 19:00 IST
Last Updated 3 ಡಿಸೆಂಬರ್ 2020, 19:00 IST

ರಾಜಕೀಯದಲ್ಲಿ ಧರ್ಮಗುರುಗಳ ಹಸ್ತಕ್ಷೇಪದ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಹೆಚ್ಚಿನ ರಾಜಕಾರಣಿಗಳು ಸ್ವಾಮೀಜಿಗಳ ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ಪಾಡಿಗೆ ತಾವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡಿದ್ದ ಸ್ವಾಮೀಜಿಗಳನ್ನು ರಾಜಕೀಯ ಪಡಸಾಲೆಗೆ ಎಳೆದುತಂದಿದ್ದೇ ಈ ರಾಜಕಾರಣಿಗಳು.

ಇದೇ ರಾಜಕಾರಣಿಗಳು ಪ್ರತೀ ಚುನಾವಣೆಯ ಸಂದರ್ಭದಲ್ಲೂ ಆಯಾ ಜಾತಿಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಮತಗಳು ತಮ್ಮ ಪರವಾಗಿ ಬೀಳುವಂತೆ ಬೇಡಿಕೊಂಡು, ಗೆದ್ದು ಬಂದಿರುವುದು ಸುಳ್ಳಲ್ಲ. ಈಗ ಹಸ್ತಕ್ಷೇಪವನ್ನು ವಿರೋಧಿಸಿದರೆ ಹೇಗೆ?

ಅಶೋಕ ಓಜಿನಹಳ್ಳಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.