ADVERTISEMENT

ಇವರಲ್ಲಿ ಅಲ್ಲಾವುದ್ದೀನನ ‘ಅದ್ಭುತ ದೀಪ’ ಇದೆಯೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ನವೆಂಬರ್ 2019, 18:00 IST
Last Updated 21 ನವೆಂಬರ್ 2019, 18:00 IST

ರಾಜ್ಯದಲ್ಲಿ ಉಪಚುನಾವಣೆಯ ಪ್ರಯುಕ್ತ ರಾಜಕೀಯ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಆಸ್ತಿ ವಿವರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇಲ್ಲಿ ಕೆಲ ಅಭ್ಯರ್ಥಿಗಳಿಗೆ ಸಮಾನವಾಗಿ ಅನ್ವಯವಾಗುವ ಒಂದು ಅಂಶ ಓದುಗರು ಹುಬ್ಬೇರಿಸುವಂತೆ ಮಾಡಿದೆ. ಸ್ಪರ್ಧೆಗಿಳಿದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಚರ, ಸ್ಥಿರಾಸ್ತಿಯ ಮೌಲ್ಯ ಒಂದೆರಡು ವರ್ಷಗಳಲ್ಲಿ ಅಂಕೆಯಿಲ್ಲದೆ ನಾಗಾಲೋಟದಲ್ಲಿ ವೃದ್ಧಿಯಾದದ್ದು ಕಂಡುಬರುತ್ತದೆ. ಇವರಲ್ಲೇನಾದರೂ ಬೇಕಾದುದನ್ನು ದಯಪಾಲಿಸುವ ಅಲ್ಲಾವುದ್ದೀನನ ‘ಅದ್ಭುತ ದೀಪ’ವಿದೆಯೇ? ಸಂಪತ್ತು ನೂರಾರು ಪಟ್ಟು ಹೆಚ್ಚಳವಾಗಲು ಅವರು ಕೊಡುವ ಕಾರಣಗಳು ಅಸಮರ್ಪಕವಾಗಿವೆ. ಪಡೆಯುವ ಕೃಷಿ ಆದಾಯ, ಮನೆ ಬಾಡಿಗೆ, ವ್ಯವಹಾರ... ಹೀಗೆ ಹೇಳಿಕೊಳ್ಳುವ ಮೂಲಗಳು ಇಷ್ಟರಮಟ್ಟಿನ ಆಗರ್ಭ ಶ್ರೀಮಂತಿಕೆಗೆ ಕಾರಣವಾಗುವುದಾದರೆ, ಬಹಳಷ್ಟು ಮಂದಿ ಇಂತಹ ವ್ಯವಹಾರಗಳಿಂದ ಕನಿಷ್ಠ
ಪಕ್ಷ ಸ್ಥಿತಿವಂತರಾದರೂ ಆಗಿರಬೇಕಿತ್ತಲ್ಲವೇ? ಆದಾಯದ ಈ ಮೂಲಗಳಿಂದ ಬಾಚಿಕೊಳ್ಳುವಷ್ಟು ಸಂಪತ್ತು ಸೃಷ್ಟಿಯಾಗುತ್ತದೆ ಎಂದು ಯಾವ ಹುಂಬನೂ ನಂಬುವುದಿಲ್ಲ. ಹಾಗಾದರೆ ಇದರ ಮೂಲ ಯಾವುದು? ಅದು ಅವರಿಗಷ್ಟೇ ಗೊತ್ತಿರುವ ರಹಸ್ಯ.

ಸ್ವಲ್ಪವೂ ಅಳುಕಿಲ್ಲದೆ ಬಹಿರಂಗಪಡಿಸುವ ಆದಾಯ ಮೀರಿದ ಆಸ್ತಿ ಕುರಿತು ಪ್ರಶ್ನಿಸುವ, ಅದರ ಮರ್ಮ ಭೇದಿಸುವ ಪರಿಣಾಮಕಾರಿ ವ್ಯವಸ್ಥೆ ನಮ್ಮಲ್ಲಿಲ್ಲವೇ?

ಧರ್ಮಾನಂದ ಶಿರ್ವ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.