ADVERTISEMENT

ಸುಳ್ಳು ಸಂದೇಶಕ್ಕೆ ಸ್ಫೂರ್ತಿ?

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 18:22 IST
Last Updated 3 ಜೂನ್ 2021, 18:22 IST

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗಂತೂ ಹಲವು ಸಂದೇಶಗಳನ್ನು ಫೋಟೊಶಾಪ್ ಮಾಡಿ ವಿವಿಧ ನಾಯಕರ, ಪಕ್ಷಗಳ ತೇಜೋವಧೆ ಮಾಡಲಾಗುತ್ತಿದೆ. ಇದನ್ನು ಅವರವರ ಐ.ಟಿ ಸೆಲ್‌ಗಳು ಮಾಡುತ್ತಿರಬಹುದು. ಅವುಗಳನ್ನು ವ್ಯವಸ್ಥಿತವಾಗಿ ಅಭಿಮಾನಿಗಳು, ಭಕ್ತರು, ಕಾರ್ಯಕರ್ತರು ಹರಿಯಬಿಡುತ್ತಿದ್ದಾರೆ. ವಿಪರ್ಯಾಸವೆಂದರೆ, ಸಾಧನೆಗಳಿಗಿಂತ ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಕೀಳುಮಟ್ಟದ ಭಾಷೆಯನ್ನು ಸಹ ಬಳಸಲಾಗುತ್ತಿದೆ. ಅಂಗೈಯಲ್ಲಿ ವಿಶ್ವವನ್ನು ಕಾಣಿಸುವ ಮೊಬೈಲ್‌ಗಳು ಮನುಕುಲಕ್ಕೆ ಉತ್ತಮ ಸಂದೇಶ, ಮಾಹಿತಿ ಕೊಡುವುದಕ್ಕಿಂತ ಯುವಜನಾಂಗಕ್ಕೆ ಮಾರಕ ಸಂದೇಶಗಳನ್ನು ನೀಡುತ್ತಿರುವುದು ವಿಷಾದದ ಸಂಗತಿ.

ತೇಜೋವಧೆಗೆ ಒಳಪಟ್ಟವರು ಯಾವುದೇ ಕಾನೂನು ಕ್ರಮ ಜರುಗಿಸದೇ ಹೋಗುವುದು ಇವರುಗಳಿಗೆ ಇಂತಹ ಸುಳ್ಳು ಸಂದೇಶಗಳನ್ನು ಇನ್ನಷ್ಟು ಹೆಚ್ಚಿಗೆ ಹರಿಯಬಿಡಲು ಸ್ಫೂರ್ತಿಯಾಗಿರಬಹುದು. ಇಂತಹ ಬೆಳವಣಿಗೆ ಸರಿಯಲ್ಲ.

-ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.