ADVERTISEMENT

ಪ್ರಬಲ ಸಮುದಾಯಗಳೇ ಪರಿಹಾರ ಹುಡುಕಬೇಕು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:42 IST
Last Updated 22 ಸೆಪ್ಟೆಂಬರ್ 2022, 15:42 IST

ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮ ದೇವತೆಯ ಗುಜ್ಜುಕೋಲು ಮುಟ್ಟಿದ ಪರಿಶಿಷ್ಟ ಸಮುದಾಯದ ಬಾಲಕನನ್ನು ಥಳಿಸಿ, ದಂಡ ವಿಧಿಸಲು ಮುಂದಾಗಿದ್ದು ಅಕ್ಷಮ್ಯ. ದಲಿತರ ರಕ್ಷಣೆಗೆ ಕಾನೂನು ಬಲ ಇದ್ದರೂ ಅದನ್ನು ಎಲ್ಲೆಡೆ ನಿರ್ಲಕ್ಷಿಸಲಾಗುತ್ತಿದೆ. ಈ ಮಾತು ದಲಿತರಿಗಷ್ಟೇ ಅಲ್ಲ ಬಂಜಾರರು, ಕೊರಮ, ಕೊರಚ, ಅಲೆಮಾರಿಗಳಿಗೂ ಅನ್ವಯಿಸುತ್ತದೆ.

ಇಂತಹ ಕೃತ್ಯಗಳನ್ನು ವಿರೋಧಿಸಲು ಹಳ್ಳಿಗಳಲ್ಲಿ ದಲಿತರು ಹೆದರುತ್ತಾರೆ. ಬಲಿಷ್ಠರು ಹಲ್ಲೆ ನಡೆಸುತ್ತಾರೆ ಎಂಬ ಭೀತಿ ಇದರ ಹಿಂದೆ ಇರುತ್ತದೆ. ಬಲಿಷ್ಠ ಸಮುದಾಯಗಳೇ ಇದಕ್ಕೆ ಪರಿಹಾರ ಹುಡುಕಬೇಕು. ಜೊತೆಗೆ ತಪ್ಪಿತಸ್ಥರಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆಯಾದರೆ ಇತರರಿಗೂ ಭಯ ಹುಟ್ಟಲು ಸಾಧ್ಯ.

–ಡಾ. ಗೋವಿಂದಸ್ವಾಮಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.