ADVERTISEMENT

ಅಪಾಯಕ್ಕೆ ಒಡ್ಡದಿರಿ

ವಿಜಯ್ ಕುಮಾರ್ ಎನ್. ಬಳ್ಳಾರಿ
Published 7 ಏಪ್ರಿಲ್ 2019, 20:31 IST
Last Updated 7 ಏಪ್ರಿಲ್ 2019, 20:31 IST

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿಯನ್ನು ಪರಿಷ್ಕರಿಸುವುದಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಈ ವಿಧಿಯನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಎರಡು ಹೇಳಿಕೆಗಳು ರಾಜಕೀಯ ಪಕ್ಷಗಳ ನಡುವಿನ ಚುನಾವಣಾ ಪೈಪೋಟಿ ಎಂತಹದ್ದು ಎನ್ನುವುದನ್ನು ತೋರಿಸುತ್ತವೆ.

ಈ ವಿಧಿಯನ್ನು ರದ್ದುಗೊಳಿಸುವ ನಿಲುವನ್ನು ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ಚುನಾವಣೆ ಸಂದರ್ಭ ಮತ ಗಳಿಕೆಗಾಗಿ ರಾಜಕೀಯ ನಾಯಕರು ಇಂತಹ ಹೇಳಿಕೆ ನೀಡುವುದರಿಂದ ಸಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅಭ್ಯರ್ಥಿಗಳು ಅಧಿಕಾರದ ಆಸೆಯೊಂದನ್ನೇ ಇರಿಸಿಕೊಂಡು ಚುನಾವಣೆ ಎದುರಿಸುವುದನ್ನು ಬಿಟ್ಟು ದೇಶದ ಅಭಿವೃದ್ಧಿ ಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಿ. ದೇಶದ ಏಕತೆಯನ್ನು ಅಪಾಯಕ್ಕೆ ಒಡ್ಡುವ ನಿಲುವುಗಳು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT