ADVERTISEMENT

ವಾಚಕರ ವಾಣಿ: ಉದ್ಯೋಗ ನೇಮಕಾತಿ; ಪಾರದರ್ಶಕ ನಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 19:45 IST
Last Updated 20 ಆಗಸ್ಟ್ 2020, 19:45 IST

ಕೇಂದ್ರ ಸರ್ಕಾರದ ಉದ್ಯೋಗಗಳ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್‌ಎ) ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಉತ್ತಮ ಬೆಳವಣಿಗೆ. ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಮುಂದಾಗಿರುವುದರಿಂದ ಅಭ್ಯರ್ಥಿಗಳಲ್ಲಿ ಮಂದಹಾಸ ಮೂಡಿದೆ.

ಮೊದಲೆಲ್ಲಾ ಬೆರಳಣಿಕೆಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಹಾಗೆಯೇ ಬ್ಯಾಂಕಿಂಗ್, ರೈಲ್ವೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬೇಕಾಗಿತ್ತು. ಪಠ್ಯ ವಿಷಯವನ್ನು ಕೂಡ ಬೇರೆ ಬೇರೆಯಾಗಿ ಅಧ್ಯಯನ ಮಾಡಬೇಕಾದ್ದರಿಂದ ಏಕಾಗ್ರಚಿತ್ತದ ಅಧ್ಯಯನ ತುಸು ಕಷ್ಟವೆನಿಸಿತ್ತು.

ಪರೀಕ್ಷೆ ಬರೆದು ಮೂರು ವರ್ಷಗಳ ತನಕವೂ ಅಂಕಗಳನ್ನು ನೇಮಕಾತಿಯ ಪರಿಗಣನೆಗೆ ತೆಗೆದುಕೊಳ್ಳುವುದು ಉತ್ತಮ ನಡೆ. ಎನ್ಆರ್‌ಎ ಸ್ಥಾಪನೆಯಿಂದ ಹಿಂದಿನ ಕೆಲವು ಗೊಂದಲಗಳಿಗೆ ತೆರೆ ಎಳೆದು, ಪಾರದರ್ಶಕತೆ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದು ಪ್ರಶಂಸನೀಯ.
-ಚೆಲುವರಾಜು ಕೆ.,ಧನಗೆರೆ, ಕೊಳ್ಳೇಗಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.