ADVERTISEMENT

ಜಾತಿ ಮೀರಿದ ಮಹಾಪುರುಷ

ನಾಗರಾಜ ಮಗ್ಗದ ಕೊಟ್ಟೂರು
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST

ಕುರುಬ ಸಮುದಾಯ ಸಾಂಸ್ಕೃತಿಕ ಪಲ್ಲಟಕ್ಕೆ ಮುಂದಾಗುತ್ತಿದೆಯೇ ಎಂದು ಶಿವಕುಮಾರ ಬಂಡೋಳಿ ಪ್ರಶ್ನಿಸಿದ್ದಾರೆ. 2017ರಲ್ಲಿ ಹರಿಹರದಲ್ಲಿ ಜರುಗಿದ ಕನಕದಾಸ ಜಯಂತ್ಯುತ್ಸವದಲ್ಲಿ ಸನ್ಮಾನಿತರಿಗೆ ನೆನಪಿನ ಕಾಣಿಕೆಯ ರೂಪದಲ್ಲಿ ಕೊಟ್ಟಿದ್ದು ರೇವಣಸಿದ್ಧೇಶ್ವರರ ಮೂರ್ತಿಯಾಗಿತ್ತು. ಆ ಮೂಲಕ ಕುರುಬ ಸಮುದಾಯದವರು ಕನಕದಾಸರನ್ನು ಕುಲಗುರುವನ್ನಾಗಿ ಸ್ವೀಕರಿಸಿಲ್ಲ ಎಂದು ಹೇಳಿದಂತಾಗಿದೆ.

ಕನಕದಾಸರನ್ನು ಕುರುಬರು ಕುಲಗುರುಗಳನ್ನಾಗಿ ಮಾಡಿಕೊಂಡಿದ್ದಾರೆಯೇ ಎನ್ನುವ ಸಂಕುಚಿತ ದೃಷ್ಟಿಯ ಅವಲೋಕನ ಸರಿಯಲ್ಲ. ಇಡೀ ಮನುಕುಲವನ್ನು ಸಮ ದೃಷ್ಟಿಯಿಂದ ನೋಡಿದ ಕನಕದಾಸರು ಎಲ್ಲಾ ಮತದವರ ಡಂಬತನವನ್ನು ಟೀಕಿಸುತ್ತಾರೆ. ಕನಕದಾಸರು ಹರಿಭಕ್ತನಾಗಿದ್ದಕ್ಕೆ ಕುರುಬ ಸಮುದಾಯದವರು ಹಣೆಗೆ ನಾಮ ಹಾಕಿಕೊಂಡು ಜನಿವಾರವ ಧರಿಸಿ ವೈಷ್ಣವಾನುಯಾಯಿಗಳಾಗ
ಬೇಕೆಂದಿಲ್ಲ. ದಾಸರು ರಚಿಸಿದ ಕೀರ್ತನೆಗಳ ಸಾರವನ್ನು ಅರ್ಥೈಸಿಕೊಂಡು ಅನುಸರಿಸಿದರೆ ಸಾಕಲ್ಲವೇ? ಹರಿಹರ ಒಂದಾದರೇ ತಪ್ಪೇನಿದೆ. ದೇವನೊಬ್ಬ ನಾಮ ಹಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT