ADVERTISEMENT

‘ಕಣ್ಣಿಗೆ ಕಟ್ಟುವ’ ವಿವರಣೆ ಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 19 ಮೇ 2019, 17:10 IST
Last Updated 19 ಮೇ 2019, 17:10 IST

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟಿ.ವಿ ಚಾನೆಲ್‌ನಲ್ಲಿ ಪ್ರಸಾರವಾದ, ಕನ್ನಡ ಕ್ರಿಕೆಟ್ ವೀಕ್ಷಕ ವಿವರಣೆ ಕುರಿತುಎಂ.ಪರಮೇಶ್ವರ ಅತೃಪ್ತಿ ವ್ಯಕ್ತಪಡಿಸಿದ್ದಾರೆ (ವಾ.ವಾ., ಮೇ 15).

ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿದ್ದ ಕ್ರಿಕೆಟ್ ವೀಕ್ಷಕ ವಿವರಣೆಯನ್ನು ದೃಶ್ಯ ಮಾಧ್ಯಮದ ವೀಕ್ಷಕ ವಿವರಣೆಯೊಂದಿಗೆ ಹೋಲಿಸುವುದು ಸರಿಯಲ್ಲ. ರೇಡಿಯೊದಲ್ಲಿ ಮಾತಿಗೆ ಪ್ರಾಧಾನ್ಯ, ದೂರದರ್ಶನದಲ್ಲಿ ದೃಶ್ಯಕ್ಕೆ ಮಹತ್ವ. ಅದರಿಂದ, ಆಕಾಶವಾಣಿಯಂತೆ ದೂರದರ್ಶನದಲ್ಲಿ ವೀಕ್ಷಕ ವಿವರಣೆಯನ್ನು ‘ಕಣ್ಣಿಗೆ ಕಟ್ಟುವಂತೆ’ ನೀಡುವ ಅಗತ್ಯ ಇರುವುದಿಲ್ಲ.

ಆಕಾಶವಾಣಿಯಲ್ಲಿ ಇಂಗ್ಲಿಷ್ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ಅನುವಾದಿಸಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡುತ್ತಿದ್ದರು. ಆ ಕನ್ನಡ ಪದಗಳು ಅಪರಿಚಿತ ಪದಗಳಾದ್ದರಿಂದ, ಆ ವೀಕ್ಷಕ ವಿವರಣೆ ಆಪ್ಯಾಯಮಾನ ಎನಿಸುತ್ತಿರಲಿಲ್ಲ. ಆದರೆ ಕನ್ನಡದಲ್ಲಿ ವೀಕ್ಷಕ ವಿವರಣೆಗಾರರು ಇಂಗ್ಲಿಷ್ ಪಾರಿಭಾಷಿಕ ಪದಗಳನ್ನೇ ಬಳಸುತ್ತಿರುವುದರಿಂದ ಈ ವಿವರಣೆ ನಿಜಕ್ಕೂ ಚೆನ್ನಾಗಿದೆ. ಪೂರ್ತಿ ಅರ್ಥವಾಗದ ಹಿಂದಿ, ಇಂಗ್ಲಿಷ್ ಚಾನೆಲ್‍ಗಳಿಗೆ ಈವರೆಗೆ ಜೋತುಬಿದ್ದು ಕ್ರಿಕೆಟ್‍ನ್ನು ಆಸ್ವಾದಿಸದೇ ಹೋದೆವಲ್ಲಾ ಎಂದು ವ್ಯಥೆಯಾಗುತ್ತದೆ. ಸದ್ಯ ಈಗಲಾದರೂ ಕನ್ನಡ ಚಾನೆಲ್‍ನಲ್ಲಿ ಹೃದಯಕ್ಕೆ ಹತ್ತಿರವಾದ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ಕೇಳುವ ಸೌಭಾಗ್ಯ ದೊರೆತಿದ್ದಕ್ಕಾಗಿ ಸಂತೋಷವಾಗುತ್ತದೆ. ವಿಶ್ವಕಪ್‍ ಕ್ರಿಕೆಟ್‌ನಲ್ಲೂ ಇದೇ ರೀತಿಯ ಕನ್ನಡ ವೀಕ್ಷಕ ವಿವರಣೆ ಮೂಡಿಬರಲಿ.

ADVERTISEMENT

ಸಿ.ಚಿಕ್ಕತಿಮ್ಮಯ್ಯ,ಹಂದನಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.