ADVERTISEMENT

ಕನ್ನಡ– ತಮಿಳಿನ ಸವಿ ಸೇತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:31 IST
Last Updated 1 ಏಪ್ರಿಲ್ 2021, 19:31 IST

ಕಂಡಕ್ಟರ್‌ ಆಗಿ ನೀವು ಮೊದಲು ನಡೆಸಿದ್ದು ಬಸ್ಸನ್ನೇ ಆದರೂ... ರಸ್ತೆ ಬಿಟ್ಟು ನಿಮ್ಮ ಬಸ್ಸು ಪರದೆಯೇರಿದಾಗ ಕನ್ನಡಿಗ- ತಮಿಳು ಪಯಣಿಗರೆಲ್ಲಾ ಪ್ರೇಕ್ಷಕರಾಗಿಬಿಟ್ಟರಲ್ಲಾ! ನೀವು ಟಿಕೆಟ್ ಕೊಡುವುದ ನಿಲ್ಲಿಸಿದರೂ ಕೋಟಿ ಕೋಟಿ ಅಭಿಮಾನಿಗಳು ಈಗಲೂ ನಿಮ್ಮ ಸಿನಿಮಾ ಟಿಕೆಟ್‌ಗಾಗಿ ಥಿಯೇಟರ್‌ನಲ್ಲಿ ನಿಲ್ಲುತ್ತಲೇ ಇದ್ದಾರಲ್ಲಾ!

ಅದೆಷ್ಟು ವರ್ಷವಾಯಿತೋ ನೀವು ಸೀಟಿ ಊದುವುದು ನಿಲ್ಲಿಸಿ, ಅಭಿಮಾನದ ಸೀಟಿಯ ಅಬ್ಬರ ಮಾತ್ರ ಪ್ರತಿಧ್ವನಿಸುತ್ತಲೇ ಇದೆಯಲ್ಲಾ ರಜನಿ ಸರ್... ತೃಪ್ತಿಪಟ್ಟಿದ್ದೀರಿ, ಕೃತಜ್ಞರಾಗಿದ್ದೀರಿ, ಅದಕ್ಕಾಗಿ ಈಗ ಫಾಲ್ಕೆ ಪಟ್ಟವ ಮುಡಿಗೇರಿಸಿಕೊಂಡಿದ್ದೀರಿ. ಸದಾ ಹೀಗೇ ಇರಿ, ಕನ್ನಡ– ತಮಿಳಿಗೆ ಸವಿ ಸೇತುವೆಯಾಗಿರಿ.

ಜೆ.ಬಿ.ಮಂಜುನಾಥ, ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.