ADVERTISEMENT

ವೋಟ್ ಬ್ಯಾಂಕ್‌ ರಾಜಕಾರಣ ಸಾಕುಮಾಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:30 IST
Last Updated 19 ಡಿಸೆಂಬರ್ 2021, 19:30 IST

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕಿತಾಪತಿ ಪ್ರಾರಂಭವಾಗಿರುವುದಕ್ಕೆ ಬೆಳಗಾವಿಯ ಕೆಲವು ಕನ್ನಡಿಗ ರಾಜಕಾರಣಿಗಳ ಹೊಂದಾಣಿಕೆ ರಾಜಕಾರಣವೇ ಕಾರಣ. ಮರಾಠಾ ವೋಟ್ ಬ್ಯಾಂಕ್‌ ರಾಜಕಾರಣಕ್ಕೆ ಹೆದರಿ ಯಾವೊಬ್ಬ ಸ್ಥಳೀಯ ಜನಪ್ರತಿನಿಧಿಯೂ ಅವರ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿಲ್ಲ. ಸಭೆ, ಸಮಾರಂಭಗಳಲ್ಲಿ ಭಾಷಣದ ಕೊನೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಜೈ ಕರ್ನಾಟಕದ ಜೊತೆಗೆ ಜೈ ಮಹಾರಾಷ್ಟ್ರ ಅನ್ನುವ ಪರಿಪಾಟವನ್ನು ಬೆಳೆಸಿಕೊಂಡಿದ್ದರಿಂದಲೇ ಎಂಇಎಸ್ ಮತ್ತೆ ಬಾಲ ಎತ್ತುತ್ತಿದೆ. ಹೀಗಾದರೆ ಬೆಳಗಾವಿ ಕನ್ನಡಮಯವಾಗುವುದಾದರೂ ಹೇಗೆ? ಬೆಳಗಾವಿಯಲ್ಲಿ ಕನ್ನಡದ ಧ್ವನಿ ಗಟ್ಟಿ ಆಗಬೇಕಾದರೆ ಅಲ್ಲಿನ ರಾಜಕಾರಣಿಗಳು ಎಂಇಎಸ್ ಜೊತೆಗಿನ ಹೊಂದಾಣಿಕೆ ರಾಜಕಾರಣವನ್ನು ಬಿಡಬೇಕು.

-ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT