ADVERTISEMENT

ಪಥ ಮರುನಾಮಕರಣ: ಒಂದು ಅಪಥ್ಯ ನಡೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಪಂಪ ಮಹಾಕವಿಯ ಹೆಸರಿನ ರಸ್ತೆಯ ಮರುನಾಮಕರಣಕ್ಕೆ ಮುಂದಾಗಿರುವ ಸುದ್ದಿ ತಿಳಿದು ಆಘಾತವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕದ ಎಲ್ಲ ರಸ್ತೆಗಳೂ ತೆರೆದುಕೊಂಡಿವೆ ಎಂಬ ವಾಸ್ತವವನ್ನು, ಸತ್ಯವನ್ನು ಇವರು ಮನಗಂಡಂತಿಲ್ಲ. ಏಕೆಂದರೆ ಇವರು ಚುನಾಯಿತರು! ಕನ್ನಡಕ್ಕಾಗಿ ಮಾಡಲು ಅನೇಕ ಕೆಲಸಗಳಿವೆ. ಇತ್ತೀಚೆಗೆ ಬ್ಯಾಂಕ್ ವ್ಯವಹಾರ ಕುರಿತ ನ್ಯಾಯಾಲಯದ ತೀರ್ಪನ್ನು ಆಧಾರವಾಗಿಸಿಕೊಂಡು ಕಸಾಪ ಅಧ್ಯಕ್ಷರು ಬೆಂಗಳೂರಿನಲ್ಲಿ ಕನ್ನಡಕ್ಕೆ ಕಂಟಕವಾಗಿರುವ ಬಾಧಕಗಳ ನಿವಾರಣೆಗೆ ಮುಂದಾಗಬೇಕಿತ್ತು. ರಾಜಧಾನಿಯ ಕೆಲವು ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುತ್ತಿದ್ದಾರೆ. ಅಲ್ಲಿ ಹೋಗಿ ಕನ್ನಡದ ಕಹಳೆಗೆ ಮುಂದಾಗಬೇಕಿತ್ತು.

ರೈಲ್ವೆ ಇಲಾಖೆಯಲ್ಲಿ ಕನ್ನಡದ ಬಳಕೆಯಾಗುತ್ತಿಲ್ಲ. ಉದಾಹರಣೆಗೆ: ಯಶವಂತಪುರ ನಿಲ್ದಾಣದ 1ನೇ ಗೇಟಿನಲ್ಲಿ ಕನ್ನಡದ ಯಾವ ಫಲಕವೂ ಕಾಣುವುದಿಲ್ಲ. ಅನೇಕ ಬ್ಯಾಂಕುಗಳಲ್ಲಿ, ಎಟಿಎಮ್‌ಗಳಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳಲ್ಲೇ ಕನ್ನಡದಲ್ಲಿ ವ್ಯವಹಾರವಿಲ್ಲ. ಇಂತಹ ಸಮಸ್ಯೆಗಳನ್ನು ಅಧ್ಯಕ್ಷರು ಕಣ್ಣು ತೆರೆದು ನೋಡಬೇಕಿತ್ತು. ಅದು ಬಿಟ್ಟು, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೂ ಸೇರಿದಂತೆ ಅನೇಕ ಧೀಮಂತರ ಚಿಂತನೆಗಳ ಚರ್ಚೆಯ (ವಿಷಾದವಾಗುತ್ತಿದೆ, ಇತ್ತೀಚೆಗೆ ಚರ್ಚೆಗಳು ನಡೆಯುತ್ತಿಲ್ಲ!) ಫಲಸ್ವರೂಪದ ಐತಿಹಾಸಿಕ ಹೆಸರನ್ನು ಬದಲಾಯಿಸಲು ಹೊರಟರೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಾದೀತು.

– ಕಾಂತೇಶ ಕದರಮಂಡಲಗಿ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.