‘ಸಣ್ಣತನದಿಂದ ನಡೆದುಕೊಂಡು, ಯಾರಿಗಾದರೂ ಅಪಚಾರ ಮಾಡಿದ್ದರೆ ನಾನು ನೇಣುಹಾಕಿಕೊಳ್ಳಲು ತಯಾರಿದ್ದೇನೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಸೆ. 14). ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಗೆ ವಾಚ್‌ಮ್ಯಾನ್ ಆಗುತ್ತೇನೆ ಎಂದು ಜಮೀರ್ ಅಹಮದ್ ಅವರು ಹೇಳಿದ್ದರು. ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ, ಇದೇ ನನ್ನ ಕೊನೆಯ ಚುನಾವಣೆ, ಅವರು ಮಾಡಿದ್ದೆಲ್ಲಾ ಗೊತ್ತು, ಸಮಯ ಬಂದಾಗ ಬಹಿರಂಗ ಮಾಡುತ್ತೇನೆ ಎಂದೆಲ್ಲಾ ಕೆಲವರು ತಮ್ಮತಮ್ಮ ವಾಗ್ಝರಿಯನ್ನು ಹರಿಯಬಿಡುತ್ತಿರುತ್ತಾರೆ. ಆದರೆ ಇಂತಹ ಹೇಳಿಕೆಗಳು ಯಾವುವೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.
ಮುಖಂಡರು ಇಂತಹ ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಈ ರೀತಿಯ ವಿವೇಚನಾರಹಿತ ಹೇಳಿಕೆಗಳಿಂದ ಅವರ ಗೌರವಕ್ಕೆ ಚ್ಯುತಿ ಉಂಟಾಗಬಹುದೇ ವಿನಾ ಬದಲಾವಣೆಗಳನ್ನಂತೂ ನಿರೀಕ್ಷಿಸಲು ಸಾಧ್ಯವಿಲ್ಲ.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.