ADVERTISEMENT

ಮಾದರಿ ಶಿಕ್ಷೆ ಪರಿಗಣಿಸಿ

ಯೋಗೇಶ್ ವೈ.ಸಿ. ಮಂಡ್ಯ
Published 20 ಮಾರ್ಚ್ 2019, 20:23 IST
Last Updated 20 ಮಾರ್ಚ್ 2019, 20:23 IST
   

ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದ ದಂಪತಿಗೆ ಎರ್ನಾಕುಲಂನ ಸರ್ಕಾರಿ ಆಸ್ಪತ್ರೆಯಲ್ಲಿ 100 ಗಂಟೆಗಳ ಕಾಲ ರೋಗಿಗಳ ಆರೈಕೆ ಮಾಡಬೇಕೆಂಬ ಸಾಮಾಜಿಕ ಸೇವೆಯ ಶಿಕ್ಷೆ ವಿಧಿಸಿರುವ ಕೇರಳ ಹೈಕೋರ್ಟ್ ಆದೇಶ (ಪ್ರ.ವಾ., ಮಾರ್ಚ್‌ 20) ಶ್ಲಾಘನೀಯ. ಅಪರಾಧ ಮಾಡುವವರಿಗೆ ಸಾಮಾನ್ಯವಾಗಿ ದಂಡ, ಗಡಿಪಾರು, ಜೈಲುವಾಸದಂತಹ ಶಿಕ್ಷೆಗಳನ್ನು ನ್ಯಾಯಾಲಯಗಳು ನೀಡುತ್ತವೆ. ಸಮಾಜಕ್ಕೆ ಒಳಿತನ್ನು ಉಂಟುಮಾಡುವ ಇಂತಹ ಶಿಕ್ಷೆಗಳನ್ನೂ ಕೆಲವು ಪ್ರಕರಣಗಳಲ್ಲಿ ಪರಿಗಣಿಸಬೇಕು. ಇದರಿಂದ ಅಪರಾಧಿಗಳ ಮನಃಪರಿವರ್ತನೆಗೆ ಸೂಕ್ತ ಅವಕಾಶ ಮಾಡಿಕೊಟ್ಟಂತೆ ಸಹ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.