ADVERTISEMENT

ಬೆಲೆ ಏರಿಕೆಯ ಆಘಾತ ತರವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಸೆಪ್ಟೆಂಬರ್ 2022, 19:30 IST
Last Updated 14 ಸೆಪ್ಟೆಂಬರ್ 2022, 19:30 IST

ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಅಧೀನದ ಹಾಲು ಒಕ್ಕೂಟಗಳು ಹೈನೋತ್ಪನ್ನಗಳಾದ ಪೇಡಾ, ಮೈಸೂರು ಪಾಕ್‌, ತುಪ್ಪ ಮತ್ತಿತರ ಪದಾರ್ಥಗಳ ದರವನ್ನು ಏರಿಸಿದ್ದವು. ಇದೀಗ ಮಂಡಳಿಯು ಮತ್ತೊಮ್ಮೆ ಹಾಲಿನ ಗ್ರಾಹಕರಿಗೆ ಬೆಲೆ ಏರಿಕೆಯ ಆಘಾತ ನೀಡಲು ಮುಂದಾಗಿದೆ. ಹಾಲು ಉತ್ಪಾದಕರ ಹಿತವನ್ನೇ ಮುಂದಿಟ್ಟುಕೊಂಡು, ಗ್ರಾಹಕರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳುವ ಮಂಡಳಿ, ಬೆಲೆ ಏರಿಕೆಯಲ್ಲಿ ಯಾವುದೇ ವ್ಯತ್ಯಯವಾದರೂ ಅದರಿಂದ ಗ್ರಾಹಕನಿಗೆ ಹೊರೆ ಎಂಬುದನ್ನೇ ಮರೆತಿದೆ.

ಹಾಲಿನ ಬೆಲೆ ಲೀಟರಿಗೆ ಮೂರು ಅಥವಾ ನಾಲ್ಕು ರೂಪಾಯಿ ಜಾಸ್ತಿಯಾದರೂ ಮತ್ತೊಮ್ಮೆ ಹಾಲಿನ ಉಪ ಉತ್ಪನ್ನಗಳ ಬೆಲೆ ಜಾಸ್ತಿಯಾಗುವುದಿಲ್ಲವೇ? ಈಗಾಗಲೇ ಒಂದು ಕಪ್‌ ಕಾಫಿ, ಟೀಗೆ ₹ 15– 20 ಇದ್ದು, ಹಾಲನ್ನು ಆಧರಿಸಿ ಮಾಡುವ ಸಿಹಿ ಖಾದ್ಯಗಳು, ತಿಂಡಿಗಳ ಬೆಲೆಯನ್ನು ಹೋಟೆಲ್‌ನವರು ಮತ್ತೆ ಜಾಸ್ತಿ ಮಾಡುವುದಿಲ್ಲವೇ? ಹೀಗೆ ಒಂದರ ಹಿಂದೆ ಮಗದೊಂದರ ಬೆಲೆ ಏರಿಕೆಯಾಗುತ್ತಿದ್ದರೆ, ಗ್ರಾಹಕರಿಗೆ ಹೊರೆಯಾಗುವುದಿಲ್ಲವೇ?

⇒ವಿಜಯ್‌ ಹೆಮ್ಮಿಗೆ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.