ADVERTISEMENT

ಸಮಸ್ಯೆಗಳ ಮೂಲ

ವೆಂಕಟೇಶ ಮಾಚಕನೂರ
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST

ಕೇರಳ ಹಾಗೂ ಕೊಡಗಿನ ಮಹಾಪೂರ, ಮಳೆಹಾನಿಗಳಿಗೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ. ಮುಖ್ಯ ಕಾರಣ ನಮ್ಮ ದೇಶದಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಜನಸಂಖ್ಯೆ. ಇದರಿಂದಾಗಿ ನೆಲ, ಜಲ, ನಿಸರ್ಗದ ಮೇಲೆ ಹೆಚ್ಚುತ್ತಿರುವ ಒತ್ತಡ. ಅದರೊಂದಿಗೆ ಮನುಷ್ಯನ ದುರಾಸೆಯೂ ಸೇರಿ ಬೆಟ್ಟಗುಡ್ಡಗಳು ಬೋಳಾಗಿವೆ. ಅವುಗಳ ಸ್ಥಳದಲ್ಲಿ ಮೋಜು–ಮಸ್ತಿಗೆ ರೆಸಾರ್ಟ್‌ಗಳು, ವಾಣಿಜ್ಯ ವ್ಯವಹಾರ, ಕೃಷಿ ಕಾಲಿಟ್ಟರೆ ಇಂತಹುದೆಲ್ಲ ಆಗುವುದೇ.

ನಗರ ಪ್ರದೇಶಗಳಲ್ಲಿ ಕೆರೆ, ಕಾಲುವೆ, ಮೈದಾನಗಳು ಅತಿಕ್ರಮಣಕ್ಕೆ ಒಳಗಾಗಿವೆ. ಅದರ ಪರಿಣಾಮಗಳನ್ನು ಮುಂಬೈ, ಬೆಂಗಳೂರು, ಚೆನೈ ನಗರಗಳಲ್ಲಿ ನೋಡಿದ್ದೇವೆ. ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಶೀಘ್ರ ತೆಗೆದುಕೊಳ್ಳದೆ ಹೋದರೆ ಇಂತಹ ಅವಘಡಗಳನ್ನು ನಾವು ಮತ್ತೆ ಮತ್ತೆ ಎದುರಿಸುತ್ತಿರಬೇಕಾಗುತ್ತದೆ. ನೆಲ, ಜಲ, ಪರಿಸರ ಕುರಿತ ತಜ್ಞರ ವರದಿಗಳನ್ನು ರಾಜಕೀಯ ಕಾರಣಗಳಿಗಾಗಿ ನಮ್ಮ ಸರ್ಕಾರಗಳು ಉಪೇಕ್ಷಿಸುತ್ತಿರುವುದು ಒಳ್ಳೆಯದಲ್ಲ. ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಜನಸಂಖ್ಯಾ ಸ್ಫೋಟ ತಡೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಧಾರವಾಡ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.