ADVERTISEMENT

ಪಾಳೆಗಾರಿಕೆ ಮನೋಭಾವ, ಸ್ವಾಭಿಮಾನದ ಅಪೇಕ್ಷೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 19:03 IST
Last Updated 7 ಅಕ್ಟೋಬರ್ 2022, 19:03 IST
   

ಕೋಲಾರ ಜಿಲ್ಲೆಯ ದಾನವಹಳ್ಳಿಯಲ್ಲಿ ಪರಿಶಿಷ್ಟರು ಮತ್ತು ಪ್ರಬಲ ಜಾತಿಯವರ ನಡುವೆ ದೇವರ ಮೆರವಣಿಗೆ ಹಾಗೂ ಪೂಜೆಗೆ ಸಂಬಂಧಿಸಿದಂತೆ ಹೊಡೆದಾಟ, ಹೊಯ್ದಾಟಗಳು ನಡೆದಿವೆ. ಈ ಪ್ರಕರಣದ ಒಳಹೊಕ್ಕು ನೋಡಿದರೆ, ಪ್ರಬಲರ ಮನಃಸ್ಥಿತಿಯಲ್ಲಿ ಅಡಗಿರುವ ಪಾಳೆಗಾರಿಕೆಯ ಮನೋಭಾವ, ಅಸಹನೆ ಮತ್ತು ಅಸೂಯೆಯನ್ನು ಹಾಗೂ ಪರಿಶಿಷ್ಟರ ಅಂತರಂಗದಲ್ಲಿ ಅಡಗಿರುವ ಮಾನವ ಸ್ವಾಭಿಮಾನದ ಅಪೇಕ್ಷೆಯನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಈ ಬಗೆಯ ದೇವರು, ಧರ್ಮ ಮತ್ತು ಜಾತಿಯ ಹೆಸರಿನ ಗದ್ದಲವು ನಮ್ಮ ದೇಶದ ನೈಜ ಅಭಿವೃದ್ಧಿಗೆ ಬಾಧಕವಾಗಿದೆ.

ಇಂಥ ಮಾನಸಿಕ- ಸಾಂಸ್ಕೃತಿಕ ಮನಃಸ್ಥಿತಿಯನ್ನು ಹೋಗಲಾಡಿಸುವಲ್ಲಿ ಧರ್ಮಾಧಾರಿತ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಮಾತ್ರವಲ್ಲ, ಮಾನವ ಕಳಕಳಿಯುಳ್ಳವರೆಲ್ಲರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕಾದಅನಿವಾರ್ಯ ಈಗ ಒದಗಿಬಂದಿದೆ. ಧರ್ಮದ ಹೆಸರಿನಲ್ಲಿ ಮಾತನಾಡುವ ಸಂಘಗಳು ಮತ್ತು ರಾಜಕೀಯ ಕಾರಣಕ್ಕಾಗಿ ದೇಶ ಸುತ್ತುವ ನಾಯಕರು ಇಂಥ ಕಡೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜರೂರಿದೆ ಹಾಗೂ ಅದು ಅನಿವಾರ್ಯವೂ ಆಗಿದೆ.

⇒ಹೊರೆಯಾಲ ದೊರೆಸ್ವಾಮಿ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.