ADVERTISEMENT

ವಾಚಕರ ವಾಣಿ | ಸಂದರ್ಶನದ ಅಂಕ ಕಡಿತ: ಮೂಡಿದ ಭರವಸೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಫೆಬ್ರುವರಿ 2022, 19:45 IST
Last Updated 24 ಫೆಬ್ರುವರಿ 2022, 19:45 IST

ಅಕ್ರಮ, ಭ್ರಷ್ಟಾಚಾರ ಹಾಗೂ ಆಮೆಗತಿಯ ಕಾರ್ಯನಿರ್ವಹಣೆಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಹೆಸರುವಾಸಿ. 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಾತಿಗೆ ಎದುರಾಗಿದ್ದ ತೊಡಕು ನಿವಾರಿಸುವ ಉದ್ದೇಶದ ಮಸೂದೆಗೆ ವಿಧಾನಮಂಡಲ ಅನುಮೋದನೆ ನೀಡಿದೆ. ಅಕ್ರಮವನ್ನು ಸಕ್ರಮಗೊಳಿಸುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಇನ್ನೊಂದೆಡೆ, ಅದೇ ವೃಂದದ ಹುದ್ದೆಗಳಿಗೆ ನಡೆಸುವ ಸಂದರ್ಶನದ ಅಂಕಗಳನ್ನು 50ರಿಂದ 25ಕ್ಕೆ ಇಳಿಸಲು ಮುಂದಾಗಿದೆ. ಇದು 2011ನೇ ಸಾಲಿನ ವಂಚಿತ ಅಭ್ಯರ್ಥಿಗಳ ಮನಸ್ಸಿನ ತೃಪ್ತಿಗೋ ಅಥವಾ ಮುಂದೆ ಪರೀಕ್ಷೆಯನ್ನು ಎದುರಿಸಲಿರುವ ಆಕಾಂಕ್ಷಿಗಳ ಮೆಚ್ಚುಗೆಗೋ ಸರ್ಕಾರವು ಪೂರ್ವಪೀಠಿಕೆ ಹಾಕಿದಂತಿದೆ.

ಸಂದರ್ಶನದ ಅಂಕಗಳನ್ನು ಕಡಿತಗೊಳಿಸುವ ನಿರ್ಧಾರ ಉತ್ತಮವಾದುದು. ಆಕಾಂಕ್ಷಿಗಳ ಮನದಲ್ಲಿ ಇದು ಭರವಸೆಯ ಚಿಗುರೊಡೆಸಿದೆ. ನೇಮಕಾತಿಗಳನ್ನು ಇನ್ನೂ ಹೆಚ್ಚು ಪಾರದರ್ಶಕಗೊಳಿಸಲು ಸರ್ಕಾರ ದೃಢ ಹೆಜ್ಜೆ ಇಡಲಿ. ಕೆಪಿಎಸ್‌ಸಿಗೆ ಕಾಯಕಲ್ಪವನ್ನು ಕಲ್ಪಿಸಲಿ.

-ಮಲ್ಲಿಕಾರ್ಜುನ್ ಲಕ್ಷ್ಮಣ ತಿಗಡಿ, ಚಿಂಚಲಿ, ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.