ರಾಜ್ಯ ಸರ್ಕಾರವು ಬಸ್ ಸಂಚಾರಕ್ಕೆ ಅನುಮತಿ ನೀಡಿರುವುದು ಸೂಕ್ತ ನಿರ್ಧಾರವಲ್ಲ. ಈಗಾಗಲೇ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮುಂತಾದವರು ತಮ್ಮ ತಮ್ಮ ಊರುಗಳಿಗೆ ಎದ್ದೋ ಬಿದ್ದೋ ಹೋಗಿ ಸೇರಿ, ಅಲ್ಲಿನ ಜನರಿಗೂ ಕೊರೊನಾ ಸೋಂಕು ತಗುಲಿಸಿರುವ ನಿದರ್ಶನಗಳು ಬಹಳಷ್ಟಿವೆ. ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಲೇ ಇವೆ.
ಈಗ ಬಸ್ ಸಂಚಾರ ಪ್ರಾರಂಭವಾಗಿರುವುದರಿಂದ ಜನ ಊರುಗಳಿಗೆ ಹೋಗುವ ತವಕದಲ್ಲಿ ಸೂಕ್ತ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೆಲವರು ಮಾಸ್ಕ್ ಧರಿಸುತ್ತಿಲ್ಲ. ನೂಕುನುಗ್ಗಲು ಉಂಟಾಗುತ್ತಿದೆ. ಇಷ್ಟು ದಿನ ಕಾಯ್ದುಕೊಂಡು ಬಂದ ನಿಯಮಗಳೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತಿವೆ. ಹೀಗಾಗಿ, ಇನ್ನೊಂದು ತಿಂಗಳಾದರೂ ಬಸ್ ಸಂಚಾರವನ್ನು ತಡೆಹಿಡಿದಿದ್ದರೆ ಚೆನ್ನಾಗಿರುತ್ತಿತ್ತು.
-ಸಚಿನ ಕಾಂಬಳೆ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.