ADVERTISEMENT

ಕೆಟ್ಟ ಹೆಸರು ತರುತ್ತಿರುವ ‘ಜಾಣ’ ನಿರ್ವಾಹಕರು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST

ಶಿವಮೊಗ್ಗೆಗೆ ಮೊನ್ನೆ ಸಂಜೆ ಬಸ್‌ನಲ್ಲಿ ಬೆಂಗಳೂರಿನಿಂದ ಹೊರಟೆ. ಬಸ್ ಹತ್ತುವಾಗ ನಾನು ಮುಖಗವಸು ಧರಿಸಿದ್ದೇನೆಯೇ, ಅಂತರ ಕಾಯ್ದುಕೊಳ್ಳುತ್ತಿದ್ದೇನೆಯೇ ಎಂಬುದನ್ನೆಲ್ಲ ಪರಿಶೀಲಿಸಿಯೇ ನಿರ್ವಾಹಕ ನನ್ನನ್ನು ಹತ್ತಿಸಿ ಕೊಂಡರು. ಸೀಟ್ ಕೊಡುವಾಗಲೂ ಪ್ರಯಾಣಿಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡರು. ಆದರೆ ಬಸ್ಸು ತುಮಕೂರು ದಾಟಿದ ನಂತರ ಈ ಎಲ್ಲ ಎಚ್ಚರವನ್ನೂ ಗಾಳಿಗೆ ತೂರಿ, ಪ್ರತಿ ನಿಲ್ದಾಣದಲ್ಲೂ ಜನರನ್ನು ಹತ್ತಿಸಿಕೊಳ್ಳುತ್ತಲೇ ಹೋದರು. ಕೊನೆಯ ಸೀಟಿನಲ್ಲಿ ಐದು ಜನ ಕೂರುವ ಸ್ಥಳದಲ್ಲಿ ನಾಲ್ಕು ಜನರನ್ನು ಕೂರಿಸಿದರು. ನಂತರ ಪ್ರಮುಖ ಪಟ್ಟಣಗಳನ್ನು ತಲುಪುವ ಮುಂಚೆಯೇ ಕೆಲವರನ್ನು ಹತ್ತಿರದ ಹಳ್ಳಿಗಳಲ್ಲಿ ಇಳಿಸುತ್ತಿದ್ದರು. ಇಲ್ಲಿ ನಿರ್ವಾಹಕರ ಜಾಣ್ಮೆ ಎಷ್ಟಿರಬಹುದೆಂದು ಊಹಿಸಬಹುದು. ಇಂತಹ ಕೆಲವೇ ನಿರ್ವಾಹಕರಿಂದ ಎಲ್ಲಾ ನಿರ್ವಾಹಕರಿಗೂ ಕೆಟ್ಟ ಹೆಸರು ಬರುತ್ತಿದೆ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT