ADVERTISEMENT

ಜಾಗ ಖಾತೆ ಅಭಿಯಾನ: ರಾಜ್ಯದಾದ್ಯಂತ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 19:30 IST
Last Updated 10 ಜುಲೈ 2022, 19:30 IST

ದಾನಿಗಳು ನೀಡಿದ ಜಾಗವನ್ನು ಸರ್ಕಾರಿ ಶಾಲೆ ಹೆಸರಿಗೆ ದಾಖಲೀಕರಣ ಮಾಡುವ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುರು ಆಗಿರುವುದು ಹರ್ಷದಾಯಕ ವಿಷಯ. ಹೀಗೇ ಈ ಅಭಿಯಾನವು ಇಡೀ ಕರ್ನಾಟಕದ ತುಂಬೆಲ್ಲಾ ಜಾರಿಯಾದರೆ ಉತ್ತಮ. ಬಹುತೇಕ ಸರ್ಕಾರಿ ಶಾಲೆಗಳಿಗೆ ದಾನ ನೀಡಿದ ಜಾಗ, ಹೊಲ, ಕಣ ಮುಂತಾದ ಭೂಪ್ರದೇಶವನ್ನು ಪಟ್ಟಭದ್ರ ಹಿತಾಸಕ್ತಿಯ ಜನ ದುರುಪಯೋಗ ಮಾಡಿಕೊಂಡಿರುವುದೂ ಇದೆ.ಶಾಲೆಯ ಜಮೀನನ್ನು ಕೃಷಿಗಾಗಿ ಬಳಸಿ ಶಾಲೆಗೆ ಒಂದು ಪೈಸೆಯನ್ನೂ ನೀಡದೆ ಸಂಪೂರ್ಣವಾಗಿ ಫಲವನ್ನು ತಾವೇ ಪಡೆಯುತ್ತಿದ್ದಾರೆ.

ಇಂತಹ ಅನೇಕ ಪ್ರಕರಣಗಳು ರಾಜ್ಯದ ಮೂಲೆಮೂಲೆಗಳಲ್ಲೂ ಇವೆ. ಇದೊಂದು ಪ್ರಮುಖ ಅಭಿಯಾನವಾಗಲಿ, ದಾನಿಗಳು ಸದುದ್ದೇಶದಿಂದ ನೀಡಿದ ‘ಭೂದಾನ’ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗೆ ಸದ್ವಿನಿಯೋಗವಾಗಲಿ.

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.