ADVERTISEMENT

ಭಾಷೆ ಕಲಿಕೆ: ವ್ಯಾಖ್ಯಾನ ಬದಲಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಆಗಸ್ಟ್ 2020, 19:45 IST
Last Updated 31 ಆಗಸ್ಟ್ 2020, 19:45 IST

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯು ಹಿಂದಿಯನ್ನು ಮೂರನೇ ಭಾಷೆಯಾಗಿ ಅಭ್ಯಾಸ ಮಾಡುವ ಅವಕಾಶ ನೀಡಿದೆ. ಇದಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಹಿಂದಿ ಒಂದು ಭಾರತೀಯ ಭಾಷೆ. ಅದರ೦ತೆ ಕನ್ನಡ, ತೆಲುಗು, ಮರಾಠಿ, ಮಲಯಾಳಿ, ಒರಿಯಾ, ಬೆಂಗಾಲಿ ಮುಂತಾದವು ಸಹ. ಆದ್ದರಿಂದ ಹಿಂದಿ ಎ೦ಬುದರ ಬದಲಾಗಿ ‘ಯಾವುದೇ ಭಾರತೀಯ ಭಾಷೆ’ ಎ೦ದು ವ್ಯಾಖ್ಯಾನಿಸಬೇಕು. ಇದರಿಂದ ಭಾರತೀಯರಿಗೆ ಯಾವುದೇ ಭಾಷೆ ಕಲಿಯುವ ಅವಕಾಶ ಸಿಗುತ್ತದೆ ಮತ್ತು ರಾಷ್ಟ್ರೀಯ ಭಾವೈಕ್ಯ ಬೆಳೆಯುತ್ತದೆ, ಅನ್ಯಭಾಷಾ ದ್ವೇಷ ಕಡಿಮೆಯಾಗುತ್ತದೆ.

ಎಚ್.ಜಿ.ಹಂಪಣ್ಣನವರ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT