ADVERTISEMENT

ಕಾನೂನು ತಿದ್ದುಪಡಿ: ದೇಶವೇ ಬಂದಿಖಾನೆಯಾದೀತು...!

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:15 IST
Last Updated 18 ಆಗಸ್ಟ್ 2019, 20:15 IST

ದೇಶದಲ್ಲಿ ಶಿಸ್ತು ತರುವ ಹುಮ್ಮಸ್ಸಿನಲ್ಲಿ ಕೇಂದ್ರ ಸರ್ಕಾರವು ಮುಸ್ಲಿಂ ಮಹಿಳೆಯರ ಮದುವೆ ಹಕ್ಕಿನ ರಕ್ಷಣೆ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ ಹಾಗೂ ಕಂಪನಿ ಕಾಯ್ದೆಯಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದಂತೆ ತರಲಾದ ತಿದ್ದುಪಡಿಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಹಿತರಕ್ಷಣಾ ಕಾಯ್ದೆಯಲ್ಲಂತೂ, ಹಾದಿ ತಪ್ಪಿಸುವ ಜಾಹೀರಾತು ನೀಡಿದಲ್ಲಿ ಉತ್ಪಾದಕರೊಟ್ಟಿಗೆ ಜಾಹೀರಾತುದಾರರು ಹಾಗೂ ಅಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸಿನಿಮಾ ತಾರೆಯರು, ಕ್ರೀಡಾಪಟುಗಳು ಅಥವಾ ಇನ್ನಾವುದೇ ಗಣ್ಯ ವ್ಯಕ್ತಿಗಳಿಗೂ ಜೈಲು ಶಿಕ್ಷೆ ನೀಡಬಹುದಾಗಿದೆ! ಆದರೆ ಈ ಎಲ್ಲಾ ಕಾನೂನುಗಳ ಅಡಿಯಲ್ಲಿನ ವ್ಯಾಜ್ಯಗಳು ಸಿವಿಲ್ ವ್ಯಾಜ್ಯಗಳು. ಇವುಗಳಿಗೆ ದಂಡ ವಿಧಿಸುವ ಬದಲು, ಅಪರಾಧವೆಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸುತ್ತಾ ಹೋದರೆ ಇಡೀ ದೇಶವನ್ನೇ ಬಂದಿಖಾನೆ ಮಾಡಬೇಕಾದೀತು! ಆದರೆ ನ್ಯಾಯ ಪರಿಪಾಲನೆಯ ಇತಿಹಾಸವನ್ನು ಗಮನಿಸಿದರೆ, ಎಲ್ಲಾ ತಪ್ಪುಗಳಿಗೂ ಜೈಲು ಶಿಕ್ಷೆಯೊಂದೇ ಪರಿಹಾರವಲ್ಲ ಎಂಬುದು ವೇದ್ಯವಾಗುತ್ತದೆ. ಆದ್ದರಿಂದ ಕೂಡಲೇ ಈ ಕಾಯ್ದೆಗಳನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ.

-ಎಚ್‌.ಎಸ್‌.ನಂದಕುಮಾರ್, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT