ADVERTISEMENT

ಸಂಸ್ಕೃತಿ ಬೆಳೆಯಲಿ, ಹಸಿವೂ ನೀಗಲಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 18:53 IST
Last Updated 13 ಆಗಸ್ಟ್ 2021, 18:53 IST

ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಸಂಸ್ಥೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಹೂಗುಚ್ಛ, ಹಾರ ತುರಾಯಿಗೆ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂಬ ಸರ್ಕಾರದ ಆದೇಶ, ಕನ್ನಡದ ಹಿತದೃಷ್ಟಿಯಿಂದ ಸ್ವಾಗತಾರ್ಹ ಕ್ರಮ ಎನ್ನುವುದನ್ನು ಒಂದು ನೆಲೆಯಿಂದ ಒಪ್ಪಿಕೊಳ್ಳಬಹುದು. ಯಾಕೆಂದರೆ ಈ ರೂಪದಲ್ಲಾದರೂ ಪುಸ್ತಕ ಕೊಳ್ಳುವ ಮತ್ತು ಓದುವ ಸಂಸ್ಕೃತಿ ದ್ವಿಗುಣಗೊಳ್ಳಬಹುದು ಎಂಬುದು ಕನ್ನಡಿಗರ ಕಲ್ಪನೆ. ಆದರೆ ಇದರಿಂದ ಹಾರ, ಹಣ್ಣಿನ ಬುಟ್ಟಿ, ಹೂಗುಚ್ಛ, ನೆನಪಿನ ಕಾಣಿಕೆ, ಮರದ ಹಾಗೂ ಇತರ ಕರಕುಶಲ ವಸ್ತುಗಳನ್ನು ತಯಾರಿಸುವ, ಅವನ್ನು ಮಾರುವವರ ಹಸಿವಿನ ನೋವನ್ನು ಬಲ್ಲವರಾರು?

ಆರ್ಥಿಕವಾಗಿ ಸಮಾಜದ ತಳಹಂತದಲ್ಲಿರುವ ಈ ವರ್ಗ ಇಂತಹ ವಸ್ತುಗಳನ್ನು ತಯಾರಿಸುವ ಮತ್ತು ಮಾರುವ ಮೂಲಕ ಅನ್ನದ ದಾರಿ ಕಂಡುಕೊಂಡಿತ್ತು. ಆದರೆ ಸರ್ಕಾರದ ಆದೇಶವು ಈಗ ಈ ಸಮುದಾಯದ ಅನ್ನಕ್ಕೆ ಕುತ್ತು ತಂದಿದೆ ಎನ್ನುವುದು ನಾವೆಲ್ಲ ಒಪ್ಪಿಕೊಳ್ಳಬೇಕಾದ ವಿಷಯ. ಪುಸ್ತಕ ಸಂಸ್ಕೃತಿಯೂ ಬೆಳೆಯಬೇಕು ಸಾಮಾನ್ಯರ ಹಸಿವೂ ನೀಗಬೇಕು ಎಂಬಂಥ ನಿಯಮ ಜಾರಿಗೆ ಬರಲಿ.

ಡಾ. ಅಣ್ಣಪ್ಪ ಎನ್. ಮಳೀಮಠ್,ಹಾರೋಹಿತ್ತಲು, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.