ADVERTISEMENT

ಬಡವರ ಆರೋಗ್ಯ ಶ್ರೀಮಂತಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST

ಆರೋಗ್ಯ ಕಾರ್ಡ್‌ಗಳು ಈಗ ಮಧ್ಯಮ ವರ್ಗದವರನ್ನು ಕಾಪಾಡುವ ಸ್ಥಿತಿಯಲ್ಲಿ ಇಲ್ಲ. ಯಶಸ್ವಿನಿ ರದ್ದಾಗಿದೆ. ಸರ್ಕಾರ ಇದರ ಬಗ್ಗೆ ಯೋಚಿಸಬೇಕಿದೆ. ಆಸ್ಪತ್ರೆಯ ಖರ್ಚನ್ನು ಭರಿಸಲಿಕ್ಕೆ ಆಗದೇ ಹೋದ ಜೀವಗಳ ಬಗ್ಗೆ ಯೋಚಿಸಬೇಕಾಗಿದೆ. ಕಿರಿಕಿರಿ ಇಲ್ಲದೆ ನೇರವಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯಲು ಅನುವಾಗುವಂಥ ಆರೋಗ್ಯ ಕಾರ್ಡನ್ನು ಚಾಲ್ತಿಗೆ ತರಬೇಕಿದೆ ಸರ್ಕಾರ.

ಕೇಂದ್ರ ಸಚಿವ ಅನಂತಕುಮಾರ್‌ರಂಥ ನಾಯಕರನ್ನು ನಮ್ಮಿಂದ (ಕುಟುಂಬಸ್ಥರಿಂದ) ದೂರ ಮಾಡಿದ ಕ್ಯಾನ್ಸರ್ ಬಗ್ಗೆ ಸಂಶೋಧನೆಗಳಾಗಬೇಕು. ಚಿಕಿತ್ಸೆ, ಪರೀಕ್ಷೆ... ಈ ಎಲ್ಲ ಪ್ರಕ್ರಿಯೆ ಸರಳವಾಗಬೇಕು. ಬಡಬಗ್ಗರಿಗೂ ಉತ್ತಮ ಚಿಕಿತ್ಸೆ ಸಿಗುವಂತಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು– ರಾಜಕೀಯವನ್ನು ದೂರವಿಟ್ಟು– ಸಮನ್ವಯದಿಂದ ಕೆಲಸ ಮಾಡಬೇಕು. ಅನಂತಕುಮಾರ್ ಅವರ ಅಕಾಲಿಕ ನಿಧನದಿಂದ, ಒಂದು ಹೋರಾಟ ಸೋತಂತಾಗಿದೆ. ಅದೆಷ್ಟೋ ರೋಗಿಗಳು ಇಂದಿಗೂ ರೋಗವನ್ನು ಹಿಮ್ಮೆಟ್ಟಿಸುವ ಅಶಾಭಾವದಿಂದ ಕಣ್ಣರಳಿಸಿ ಕಾಯುತ್ತಿದ್ದಾರೆ.

ಪ್ರತಿಭಾ ನ. ಹೆಗಡೆ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.