ADVERTISEMENT

ಅಕ್ಷರ ದಾಸೋಹ ಪುನರಾರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 15:56 IST
Last Updated 21 ಜನವರಿ 2021, 15:56 IST

ವಿದ್ಯಾಗಮ-2 ನಿಯಮದ ಪ್ರಕಾರ, ಪ್ರೌಢಶಾಲಾ ಮಕ್ಕಳಲ್ಲಿ ಕೆಲವರು ಶಾಲೆಗೆ ಬೆಳಿಗ್ಗೆ ಬಂದು ಮಧ್ಯಾಹ್ನ ಹೋದರೆ, ಇನ್ನು ಕೆಲವು ಮಕ್ಕಳು ಮಧ್ಯಾಹ್ನ ಬಂದು ಸಂಜೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಐದಾರು ಕಿ.ಮೀ. ದೂರದಿಂದ ಮಕ್ಕಳು ನಡೆದುಕೊಂಡೋ ಸೈಕಲ್ ತುಳಿದುಕೊಂಡೋ ಬರುತ್ತಾರೆ.

ಬಹುತೇಕ ಪೋಷಕರು ಕೂಲಿ ನಾಲಿ, ವ್ಯವಸಾಯ ಚಟುವಟಿಕೆಗೆ ಹೋಗಿರುತ್ತಾರೆ. ಮಧ್ಯಾಹ್ನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇದರಿಂದ, ಬೆಳೆಯುತ್ತಿರುವ ಮಕ್ಕಳು ಕುಪೋಷಣೆಗೆ ಒಳಗಾಗಬಹುದು. ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳು ಪಬ್ಲಿಕ್ ಪರೀಕ್ಷೆಗೆ ಸಿದ್ಧರಾಗಬೇಕಾಗಿರುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರಿಯಾಗಿ ಊಟ ಮಾಡದೇ ಹೋದಾಗ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ಜಾಗೃತಿ ಮುಂಜಾಗ್ರತಾ ಕ್ರಮ ಅನುಸರಿಸುತ್ತಾ ಅಕ್ಷರದಾಸೋಹ ಆರಂಭಿಸಬೇಕು.

ಪ್ರಹ್ಲಾದ ವಾ. ಪತ್ತಾರ,ಯಡ್ರಾಮಿ, ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.