ADVERTISEMENT

ವಾಚಕರ ವಾಣಿ | ಬಡವರಿಗೂ ದಕ್ಕಬೇಕು ಮಾಸ್ಕ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST

ಮಾಸ್ಕ್ ಬಳಕೆ ವಿಷಯದಲ್ಲಿ ಬಡವರಿಗೆ ಕೆಲವರು ಸಭ್ಯತೆಯ ಪಾಠ ಹೇಳುವುದನ್ನು ಸಾಕು ಮಾಡಬೇಕು ಎಂದು ಕಿರಣ್‌ ಗಾಜನೂರು ಹೇಳಿರುವುದು ಸರಿಯಾಗಿದೆ (ವಾ.ವಾ., ಜುಲೈ 24). ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತು ಮಾಸ್ಕ್ ಧರಿಸದಿದ್ದರೆ ಪೊಲೀಸ್‌ ಅಧಿಕಾರಿಗಳು ₹ 200 ದಂಡ ವಿಧಿಸುತ್ತಿದ್ದು, ಇದು ಮಾಸ್ಕ್ ಖರೀದಿಸುವುದಕ್ಕಿಂತಲೂ ಹೆಚ್ಚಿನ ಹೊರೆಯಾಗಿದೆ.

ಒಂದು ವೇಳೆ ಪೊಲೀಸರ ಬಲವಂತಕ್ಕೆ ಮಾಸ್ಕ್ ಧರಿಸಿದರೂ ಅದು ನೆಪ ಮಾತ್ರಕ್ಕಷ್ಟೇ ಎಂಬಂತೆ ಆಗಿರುತ್ತದೆ. ಮುಖ, ಬಾಯಿಯಿಂದ ಗದ್ದದ ಕೆಳಗೆ ಜಾರಿದ ಮಾಸ್ಕ್ ಯಾವ ವೈರಸ್ ತಡೆಯುತ್ತದೆಯೋ ಗೊತ್ತಿಲ್ಲ. ಒಂದೇ ಮಾಸ್ಕನ್ನು ತಿಂಗಳುಗಟ್ಟಲೆ ಧರಿಸುವ ಅನಿವಾರ್ಯ ಇರುವ ಜನರಿಗೆ ಶುಚಿತ್ವದ ಪಾಠ ಹೇಗೆ ತಾನೇ ರುಚಿಸುವುದು? ದಂಡದಿಂದ ತಪ್ಪಿಸಿಕೊಳ್ಳಲು, ಅಕ್ಷರಶಃ ಅದು ಕೊಳೆತಂತೆ ಇದ್ದರೂ ಸರಿಯೆ ಮುಖದ ಮೇಲೆ ಮಾಸ್ಕ್ ಇರಲೇಬೇಕು ಎಂಬಂತಾಗಿದೆ. ಈ ರೀತಿ ಅವೈಜ್ಞಾನಿಕವಾಗಿ, ಅಶುಚಿತ್ವದಿಂದ ಧರಿಸುವ ಮಾಸ್ಕ್ ಇತರ ಕಾಯಿಲೆಗೆ ರಹದಾರಿಯಾಗದಿರಲಿ. ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿರುವ ಸರ್ಕಾರ, ಬಡವರಿಗೆ ಅವುಗಳನ್ನು ಉಚಿತವಾಗಿ ಹಂಚಬಾರದೇಕೆ? ಇದು ಸರ್ಕಾರದ ಕರ್ತವ್ಯ ಕೂಡ.

-ಈರಣ್ಣ ಎನ್.ವಿ., ನಾರಾಯಣಪುರ, ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.