ADVERTISEMENT

ವಾಚಕರ ವಾಣಿ| ಕುವೆಂಪು ತತ್ವಾದರ್ಶದ ದರ್ಶನವಾಗಲಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 20:26 IST
Last Updated 28 ಡಿಸೆಂಬರ್ 2021, 20:26 IST

ಕುವೆಂಪು ಅವರ ಜನ್ಮದಿನವಾದ ಡಿ. 29 ಅನ್ನು ‘ವಿಶ್ವ ಮಾನವ ದಿನ’ ಎಂದು ರಾಜ್ಯ ಸರ್ಕಾರವು 2015ರಿಂದಲೂ ಆಚರಿಸಿಕೊಂಡು ಬರುತ್ತಿದೆ. ವಿಶ್ವ ಮಾನವ ಸಂದೇಶ ಸಾರಿದ ದಾರ್ಶನಿಕರಲ್ಲಿ ಕವಿತ್ವವನ್ನು ಮಾತ್ರವೇ ಕಂಡಅಲ್ಪಮತಿಗಳಾದ ನಾವು, ಇಂದಾದರೂ ಅವರ ತತ್ವಾದರ್ಶಗಳು, ಚಿಂತನೆಗಳ ಬಗ್ಗೆ ತಿಳಿಯುವ ಔದಾರ್ಯ ಹೊಂದ ಬೇಕು.

ತೇಜಸ್ವಿಯವರು ಕುವೆಂಪು ಅವರ ಕುರಿತು ‘ಕುವೆಂಪುರವರ ಸಾಮಾಜಿಕ ಕಳಕಳಿ, ಸುಧಾರಣಾ ದೃಷ್ಟಿ, ವಿಚಾರಶೀಲತೆ ಮೊದಲಾದ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಮರೆತು ಅವರನ್ನು ಕೇವಲ ಕವಿ ಹಾಗೂ ಕಲಾವಿದ ಎನ್ನುವ ನೆಲೆಗಟ್ಟಿನಲ್ಲೇ ನಾವು ಗುರುತಿಸುತ್ತಾ ಹೋದರೆ ಅವರ ಅಂತಃಸತ್ವವನ್ನು ತಪ್ಪಾಗಿ ಪ್ರತಿನಿಧಿಸಿದಂತೆ’ ಎಂದು ಹೇಳಿದ್ದರು. ತೇಜಸ್ವಿಯವರು ತೀರಿಹೋಗಿ 14 ವರ್ಷಗಳು ಕಳೆದರೂ ಕುವೆಂಪು ಅವರ ತತ್ವಾದರ್ಶಗಳು ನಮಗೆ ನಿಗೂಢವಾಗಿಯೇ ಉಳಿದಿವೆ. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶವು ಬಹು ದೊಡ್ಡ ಚಿಂತನೆಯಾಗಿದೆ. ಈಗಿರುವ ಧರ್ಮಾಂಧತೆ, ಜಾತೀಯತೆಯಿಂದ ಹೊರಬಂದು ಮನುಜಮತವೊಂದೇ ಸಾಕು ಎಂಬ ಹೆಬ್ಬಯಕೆ ಅದರಲ್ಲಿ ಅಡಕವಾಗಿದೆ. ಕುವೆಂಪು ಅವರು ಪ್ರಕೃತಿ ಕುರಿತು ರಚಿಸಿದ ಕವನಗಳನ್ನು ಇಂದು ಪಠ್ಯದಲ್ಲಿ ಕಾಣುತ್ತಿ
ದ್ದೇವೆಯೇ ವಿನಾ ಅವರ ವಿಚಾರಗಳು ಅಥವಾ ಚಿಂತನಶೀಲ ವಿಚಾರಧಾರೆಗಳನ್ನಲ್ಲ. ಅವರ ವಿಚಾರಧಾರೆಗಳು ಆದಷ್ಟು ಬೇಗ ಯುವಪೀಳಿಗೆಯನ್ನು ತಲುಪುವಂತಾಗಲಿ.

ಈರಣ್ಣ ಎನ್.ವಿ.,ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.