ADVERTISEMENT

ವಾಚಕರ ವಾಣಿ| ಹೊಸ ಸಂಕಲ್ಪ: ಬೇಕು ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST

ಹೊಸ ವರ್ಷ ಬಂತೆಂದರೆ ಸಾಕು, ಕೆಲವರು ‘ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡುಬಿಡುವೆ’ ಎಂಬಂತೆ ಮಾತನಾಡುತ್ತಾರೆ. ಇದು ವಾಸ್ತವದಲ್ಲಿ ಎಂದಿಗೂ ಸಾಧ್ಯವಿಲ್ಲ. ಪ್ರತಿದಿನದ ನಿಶ್ಚಿತ ದೃಢಸಂಕಲ್ಪದ ಕಾರ್ಯ ಮಾತ್ರ ನಮ್ಮ ಜೀವನವನ್ನು ಬದಲಾಯಿಸಬಲ್ಲದು.

ಹೀಗಾಗಿ ಈ ಹೊಸ ವರ್ಷದಂದು ಹೊಸ ಸಂಕಲ್ಪಗಳನ್ನು ಮಾಡುವುದಕ್ಕಿಂತ, ಹಿಂದೆ ನಾವು ಮಾಡಿದ ಸಂಕಲ್ಪಗಳನ್ನು ಎಷ್ಟರಮಟ್ಟಿಗೆ ಪಾಲಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಬದಲಾಗುತ್ತಿರುವುದು ಕ್ಯಾಲೆಂಡರ್ ವಿನಾ ಜೀವನವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಮಾಡುವ ಕೆಲಸವನ್ನು ಇಚ್ಛಾಪೂರ್ವಕವಾಗಿ ಮಾಡಿದರೆ ಯಶಸ್ಸು ತಾನಾಗಿಯೇ ಸಿಗುತ್ತದೆ.

- ಶರಣಬಸವ ಆರ್. ಪತ್ತಾರ,ಯಡ್ರಾಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.