ADVERTISEMENT

ವಾಚಕರ ವಾಣಿ| ಕೋರ್ಟ್‌ಗಳ ವಿಡಿಯೊ ಕಲಾಪ ಮುಂದುವರಿಯಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2020, 14:41 IST
Last Updated 14 ಮೇ 2020, 14:41 IST

ಲಾಕ್‌ಡೌನ್‌ ಕಾರಣಕ್ಕೆ ದೇಶದಾದ್ಯಂತ ನ್ಯಾಯಾಲಯಗಳ ಕಲಾಪಗಳು ನಿಂತುಹೋಗಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಮಾತ್ರ ವಿಡಿಯೊ ಕಾನ್ಫರೆನ್ಸ್ ಮೂಲಕ ಕ್ರಿಮಿನಲ್ ಪ್ರಕರಣಗಳಲ್ಲಿ ಕೆಲವು ಜಾಮೀನು ಅರ್ಜಿ, ಸಾರ್ವಜನಿಕ ಹಿತಾ
ಸಕ್ತಿ ಅರ್ಜಿಗಳು ವಿಚಾರಣೆಗೆ ಬಂದಿವೆ. ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಅತ್ಯಂತ ತುರ್ತು ಎಂದು ಭಾವಿಸಲಾದ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಆಯ್ದುಕೊಳ್ಳಲಾಗುತ್ತಿದೆ.

ಲಾಕ್‌ಡೌನ್‌ ನಂತರವೂ ವಾರದಲ್ಲಿ ಒಂದೆರಡು ದಿನವಾದರೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕಲಾಪಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕು. ಭೌತಿಕವಾಗಿ ಹಾಜರಾತಿ ಬಯಸದ ಲಕ್ಷಾಂತರ ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ, ದೂರದ ಊರುಗಳಲ್ಲಿ ಕುಳಿತೇ ಬಾಧಿತರು, ಕಕ್ಷಿದಾರರು ಮತ್ತು ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ತೊಡಗಿಸಿಕೊಳ್ಳಬಹುದು. ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ಮಂದಿಯ ಬವಣೆ ನೀಗಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಹೆಜ್ಜೆ ಇರಿಸಿದರೆ, ನ್ಯಾಯ ವಿತರಣೆಯನ್ನು ಹೆಚ್ಚು ಜನಪರಗೊಳಿಸಲು ಸಾಧ್ಯ.

– ಕೆ.ಬಿ.ಕೆ.ಸ್ವಾಮಿ, ನಾಗರಾಜ್ ಬಿ. ಗಡೇಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.