ADVERTISEMENT

ವಾಚಕರ ವಾಣಿ| ಅಸ್ವಸ್ಥ ಮನಸ್ಸಿನ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 19:30 IST
Last Updated 28 ನವೆಂಬರ್ 2022, 19:30 IST

‘ಪತಿಯ ಆಜ್ಞೆ ಪಾಲಿಸಬೇಕು’ ಎಂಬ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಬರಹವು ನಿಜವಾಗಿಯೂ ನಾವು ಎಷ್ಟನೇ ಶತಮಾನದಲ್ಲಿ ಇದ್ದೇವೆ ಎಂದು ಪ್ರಶ್ನೆ ಹುಟ್ಟಿಸುವಂತಿದೆ. ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು, ಘನತೆಯಿಂದ ಬದುಕುವ ಹಕ್ಕನ್ನು ಖಾತರಿಗೊಳಿಸಬೇಕು ಎಂದು ಹೇಳುವ ಸಂವಿಧಾನ ಒಂದು ಕಡೆಯಾದರೆ, ಇನ್ನೊಂದು ಕಡೆ, ಮಹಿಳೆಯರನ್ನು ಹೀನಾಯವಾಗಿ ಚಿತ್ರಿಸುವ ಇಂತಹ ಅಸ್ವಸ್ಥ ಮನಸ್ಸಿನ ಅಭಿವ್ಯಕ್ತಿಗಳು.

ಇಂತಹ ಮಧ್ಯಕಾಲೀನ ವಿಚಾರಗಳನ್ನು ತಿಪ್ಪೆಗೆ ಎಸೆದು ಬಹಳ ಕಾಲವಾಗಿರಬೇಕಾಗಿತ್ತು. ದುರದೃಷ್ಟವಶಾತ್ ಇಂತಹ ಮಾತುಗಳನ್ನು ಯಾವುದಾದರೂ ಒಂದು ನೆಪದಲ್ಲಿ ಹರಿಯಬಿಡುವ ಮನಸ್ಸುಗಳು ನಮ್ಮ ಮಧ್ಯೆ ಇನ್ನೂ ಇರುವುದರಿಂದ ನಾವು ಇವುಗಳ ಕುರಿತು ಇನ್ನೂ ಮಾತನಾಡಬೇಕಾಗಿದೆ.

- ಡಾ. ವಿಜಯಾ, ಡಾ. ಜಿ.ರಾಮಕೃಷ್ಣ, ಡಾ. ಎನ್.ಗಾಯತ್ರಿ, ಡಾ. ಎಚ್.ಜಿ.ಜಯಲಕ್ಷ್ಮಿ, ಡಾ. ಬಿ.ಆರ್.ಮಂಜುನಾಥ್, ಜಾಹಿದಾ ಶಿರೀನ್, ಬಿ.ಆರ್.ಸುಧಾ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.