ADVERTISEMENT

ವಾಚಕರವಾಣಿ| ಪಾರ್ಸಲ್‌ ನಿಲ್ಲಿಸಿ, ಮುಜುಗರ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:30 IST
Last Updated 15 ಮೇ 2020, 19:30 IST

ಲಾಕ್‌ಡೌನ್‌ನಿಂದಾಗಿ, ಮದ್ಯ ಮಾರಾಟದ ಜಾಗದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲವಾಗಿದೆ. ಪಾರ್ಸಲ್ ತೆಗೆದುಕೊಂಡು ಹೋಗಿ ಬೇರೆ ಕಡೆ ಕುಡಿಯಬಹುದು. ಹೆಚ್ಚಿನ ಮನೆಗಳಲ್ಲಿ ಹೆಣ್ಣು ಮಕ್ಕಳು ಮತ್ತು ಚಿಕ್ಕ ಮಕ್ಕಳು ಇರುವ ಕಾರಣ, ಮದ್ಯ ಸೇವನೆಗೆ ಅಲ್ಲಿಯೂ ಅವಕಾಶ ಇರುವುದಿಲ್ಲ. ಹಾಗಾಗಿ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋದವರು ರಸ್ತೆ ಬದಿ, ಪಾರ್ಕು, ಶಾಲಾ ಕಾಂಪೌಂಡ್, ದೇವಸ್ಥಾನದ ಆವರಣ, ನಿರ್ಮಾಣ ಹಂತದ ಕಟ್ಟಡ, ಹೊಸ ಬಡಾವಣೆ ಅಥವಾ ಜಮೀನುಗಳಲ್ಲಿ ಕುಡಿದು ಖಾಲಿ ಬಾಟಲಿ, ನೀರಿನ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್, ಉಳಿದ ಆಹಾರವನ್ನು ಬಿಸಾಡಿ ಹೋಗುತ್ತಿದ್ದಾರೆ. ಇದನ್ನೆಲ್ಲ ಸ್ವಚ್ಛ ಮಾಡುವವರು ಯಾರು? ಈ ದುರ್ನಡತೆಗೆ ಯಾರನ್ನು ಹೊಣೆ ಮಾಡುವುದು?

ಜನರಿಗೆ ಮತ್ತು ಮದ್ಯಪ್ರಿಯರಿಗೆ ಇಬ್ಬರಿಗೂ ಆಗುವ ಮುಜುಗರವನ್ನು ತಪ್ಪಿಸಲು ಮಾರ್ಗೋಪಾಯ ಶೋಧಿಸುವುದು ಒಳಿತು.

– ವಿ.ತಿಪ್ಪೇಸ್ವಾಮಿ,ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.