ADVERTISEMENT

ವಾಚಕರ ವಾಣಿ| ತ್ಯಾಗಮಯಿಗೆ ಒಂದೇ ದಿನ ಸಾಕೇ?

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:45 IST
Last Updated 11 ಮೇ 2020, 19:45 IST

ಭಾನುವಾರ ಬೆಳಿಗ್ಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹಾಗೆಯೇ ಮೊಬೈಲ್ ಡಿ.ಪಿ.ಗಳಲ್ಲೆಲ್ಲ ನನ್ನ ಗೆಳೆಯ ಗೆಳತಿಯರು ಅವರವರ ಅಮ್ಮಂದಿರ ಫೋಟೊ ಹಾಕಿಕೊಂಡು ಅಮ್ಮಂದಿರ ದಿನಕ್ಕೆ ಶುಭಾಶಯಗಳನ್ನು ಕೋರಿದ್ದರು. ಆದರೆ, ಅಮ್ಮನನ್ನು ಇಷ್ಟೆಲ್ಲ ಅಕ್ಕರೆಯಿಂದ ಪ್ರೀತಿಸುವ ಜನರಿದ್ದರೂ ಸಮಾಜದಲ್ಲಿ ಇಷ್ಟೊಂದು ವೃದ್ಧಾಶ್ರಮಗಳು ಇರುವುದೇಕೆ ಎನಿಸಿ ಆಶ್ಚರ್ಯವಾಯಿತು. ರಕ್ತ, ಮಾಂಸವನ್ನು ಹಂಚಿಕೊಂಡು ನಮಗೆ ಜನ್ಮಕೊಟ್ಟ ಆ ಮಾತೆಯನ್ನು ನೆನೆಯುವುದು ‘ತಾಯಂದಿರ ದಿನ’ಕ್ಕಷ್ಟೇ ಮೀಸಲಾಗಬೇಕೇ? ಪ್ರತಿದಿನವೂ ಅವಳನ್ನು ಆರಾಧಿಸೋಣ, ಪ್ರೀತಿಸೋಣ. ನಮ್ಮನ್ನು ಸಾಕಿ ಸಲಹುವ ಅಮ್ಮನನ್ನು ಅವಳ ವೃದ್ಧಾಪ್ಯದ ದಿನಗಳಲ್ಲಿ ನಮ್ಮಗಳ ಜೊತೆಗಿಟ್ಟುಕೊಂಡು ಮಗುವಿನಂತೆ ಪೋಷಿಸೋಣ. ಈ ಮೂಲಕ ವೃದ್ಧಾಶ್ರಮಗಳಿಗೆ ತಿಲಾಂಜಲಿ ಇಡೋಣ.

– ರಾಘವೇಂದ್ರ ಅಪುರಾ,ಅಗತಗೌಡನಹಳ್ಳಿ, ಗುಂಡ್ಲುಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT