ADVERTISEMENT

ವಾಚಕರ ವಾಣಿ| ರಾಷ್ಟ್ರಪತಿ: ಒಮ್ಮತದ ಅಭ್ಯರ್ಥಿಯಾಗಲಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST

ನೂತನ ರಾಷ್ಟ್ರಪತಿ ಆಯ್ಕೆಯ ಪ್ರಕ್ರಿಯೆ ಆರಂಭವಾಗಿದೆ. ಈ‌‌ ಸಂದರ್ಭದಲ್ಲಿ ಎನ್‌ಡಿಎ ಪರವಾಗಿ ದ್ರೌಪದಿ ಮುರ್ಮು, ಪ್ರತಿಪಕ್ಷಗಳ ಪರವಾಗಿ ಯಶವಂತ ಸಿನ್ಹಾ ಅವರು ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ಈ ಅಭ್ಯರ್ಥಿಗಳ ಹಿನ್ನೆಲೆಯನ್ನು ಗಮನಿಸಿದಾಗ, ರಾಜಕೀಯ ಮತ್ತು ಆಡಳಿತಾತ್ಮಕ ಅನುಭವವನ್ನು ಉಭಯತ್ರರೂ ಹೊಂದಿರುವುದು ತಿಳಿಯುತ್ತದೆ. ದ್ರೌಪದಿ ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿವಾದಗಳಿಂದ ಹೊರತಾದವರು. ಸಾಮಾಜಿಕ ಕಳಕಳಿಯ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಜನಾನುರಾಗಿಯಾಗಿದ್ದಾರೆ. ಶೋಷಿತ ವರ್ಗಕ್ಕೆ ಸೇರಿದ ಮಹಿಳೆಯಾಗಿರುವ ದ್ರೌಪದಿ ಅವರು ರಾಷ್ಟ್ರಪತಿ ಸ್ಥಾನಕ್ಕೆ ಅರ್ಹರು.

ಯಶವಂತ ಸಿನ್ಹಾ ಅವರೂ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹರು. ಆದರೆ, ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಒಳಗಾಗಿ ನೊಂದ ಆದಿವಾಸಿ ಮಹಿಳೆಯರನ್ನು ಪ್ರತಿನಿಧಿಸುವ ದ್ರೌಪದಿ ಅವರನ್ನು ವಿರೋಧ ಪಕ್ಷಗಳು ಬೆಂಬಲಿಸಿ, ರಾಷ್ಟ್ರಪತಿಯಾಗಿ ಅವರು ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ಮಾಡಿಕೊಡುವುದು ಸೂಕ್ತ ಮತ್ತು ಅರ್ಥಪೂರ್ಣವಾದುದು. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಈ ಕುರಿತು ಪರಸ್ಪರ ಚಿಂತನೆ ಮಾಡಿ, ಸಕಾರಾತ್ಮಕವಾದ ಒಟ್ಟಭಿಪ್ರಾಯಕ್ಕೆ ಬರಬೇಕು. ಜನಪ್ರತಿನಿಧಿಗಳು, ಬುದ್ಧಿಜೀವಿಗಳು, ಸಮಾಜಮುಖಿ ಚಿಂತಕರು ಹಾಗೂ ಸಂಘಟನೆಗಳು ಇಂತಹ ಅವಿರೋಧ ಆಯ್ಕೆಗೆ ಎಲ್ಲ ಪಕ್ಷಗಳ ಮನವೊಲಿಸಲು ಪ್ರಯತ್ನಿಸಬೇಕು.

- ಬಸವರಾಜ ಹುಡೇದಗಡ್ಡಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.