ADVERTISEMENT

ರಾಜ್ಯ ವಿಭಜನೆಯ ಮಾತು ಸಲ್ಲದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 21:02 IST
Last Updated 24 ಜೂನ್ 2022, 21:02 IST

ಉಮೇಶ ಕತ್ತಿ ಅವರು ಕರ್ನಾಟಕದ ಒಬ್ಬ ಸಚಿವರಾಗಿ ರಾಜ್ಯ ವಿಭಜನೆ ಕುರಿತು ಪ್ರಸ್ತಾಪಿಸುವುದು ನಾಡದ್ರೋಹದ ಮಾತು. ಹಿಂದೊಮ್ಮೆ ಛಿದ್ರಗೊಂಡಿದ್ದ ಕನ್ನಡಿಗರನ್ನು ಒಂದು ರಾಜ್ಯದಡಿ ತರಬೇಕೆಂದು
ನಮ್ಮ ಹಿರಿಯರು ದೀರ್ಘಕಾಲ ಹೋರಾಟ ಮಾಡಿರುವ ಇತಿಹಾಸ ಕತ್ತಿ ಅವರಿಗೆ ತಿಳಿದಿಲ್ಲ ಅನಿಸುತ್ತದೆ. ಅಂದು ಹಳೆ ಮೈಸೂರು ಭಾಗದ ಕೆಲವರಿಗೆ ಇಷ್ಟವಿಲ್ಲದೇ ಇದ್ದರೂ ಕನ್ನಡಿಗರು ಒಟ್ಟಿಗೆ ಇರಬೇಕೆಂಬ ಉದ್ದೇಶದಿಂದ ಕೆಂಗಲ್ ಹನುಮಂತಯ್ಯ ಅವರು ಸಹ ಏಕೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಇತಿಹಾಸ.

ಕತ್ತಿ ಅವರು ಕರ್ನಾಟಕದ ಭೂಪಟವನ್ನು ತಮ್ಮ ಮನಸ್ಸಿನ ಕತ್ತಿಯಿಂದ ಹರಿಯುವಂತೆ
ಮಾತನಾಡಿರುವುದು ಇದು ಮೊದಲೇನೂ ಅಲ್ಲ. ಪಕ್ಕದ ಆಂಧ್ರಪ್ರದೇಶ ವಿಭಜನೆಯಾದಂತೆ ಇಲ್ಲಿಯೂ
ಆದರೆ ತಮ್ಮ ರಾಜಕೀಯ ಆಕಾಂಕ್ಷೆ ಈಡೇರಿಸಿಕೊಳ್ಳಬಹುದು ಎಂಬ ದುರುದ್ದೇಶ ಇದ್ದಂತೆ ಕಂಡು
ಬರುತ್ತದೆ. ಇಂತಹವರಿಗೆ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಕನಸು ಏನಿತ್ತು
ಎಂಬುದು ಗೊತ್ತಿಲ್ಲ. ಕತ್ತಿ ಅವರ ಮಾತನ್ನು ಕನ್ನಡಿಗರು ಖಂಡಿಸಬೇಕಾಗಿದೆ.

- ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.