ADVERTISEMENT

ವಾಚಕರ ವಾಣಿ| ತೃತೀಯ ಲಿಂಗಿಗಳ ಪ್ರೇರಕ ನಡೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 19:30 IST
Last Updated 30 ನವೆಂಬರ್ 2022, 19:30 IST

ಇತ್ತೀಚೆಗೆ ಪ್ರಕಟಗೊಂಡ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ತೃತೀಯ ಲಿಂಗಿ ಕೋಟಾದಡಿ ಮೂವರು ಸರ್ಕಾರಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇವರ ಸಾಧನೆ ಹರ್ಷವೆನಿಸಿದೆ. ತಮ್ಮದಲ್ಲದ ತಪ್ಪಿಗೆ ಹೆತ್ತವರು, ಬಂಧುಬಳಗ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾಗಿ ತೀರಾ ಮುಜುಗರಕ್ಕೆ ಈಡಾಗುತ್ತಾರೆ ಇವರು. ಕೆಲವರು ಬೀದಿ ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುವುದು ಸಾಮಾನ್ಯ. ಸರ್ಕಾರಿ ಉದ್ಯೋಗಕ್ಕೆ ಸಿದ್ಧತೆ ನಡೆಸುವ ಅಪಾರ ಆಕಾಂಕ್ಷಿಗಳಿಗೆ, ಇತರ ಯುವ ಸಮೂಹಕ್ಕೆ ಈ ತೃತೀಯ ಲಿಂಗಿಗಳು ನಿಜಕ್ಕೂ ಪ್ರೇರಣೆ.

ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ ಭೇದಭಾವಕ್ಕೆ ಒಳಗಾಗುತ್ತ, ನಕಾರಾತ್ಮಕ ದೃಷ್ಟಿಕೋನಗಳಿಂದ ನೋಡುವ ಸಮೂಹದ ನಡುವೆ ಮೀಸಲಾತಿಯ ವರದಾನದಿಂದ ಹಾಗೂ ನ್ಯಾಯಯುತವಾದ ನೈತಿಕ ಹಕ್ಕಿನ ಅರಿವಿನಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇವರು ಮುನ್ನೆಲೆಗೆ ಬರುತ್ತಿರುವುದು ಸಕಾರಾತ್ಮಕ ಅಂಶ.

- ಅನಿಲ್ ಕುಮಾರ್,ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.