ADVERTISEMENT

ಅವೈಜ್ಞಾನಿಕ ‘ನಲಿ– ಕಲಿ’

ಮಹೇಶ್ವರ ಹುರಕಡ್ಲಿ ಬಾಚಿಗೊಂಡನಹಳ್ಳಿ
Published 22 ಜುಲೈ 2018, 19:30 IST
Last Updated 22 ಜುಲೈ 2018, 19:30 IST

ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿರುವ ‘ನಲಿ– ಕಲಿ’ ಶಿಕ್ಷಣ ವ್ಯವಸ್ಥೆಯು ಹಲವು ಲೋಪದೋಷಗಳಿಂದ ಕೂಡಿದೆ. ಈ ವ್ಯವಸ್ಥೆಯ ಪ್ರಕಾರ ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳನ್ನು ಒಂದೇ ಕೊಠಡಿಯೊಳಗೆ ಸೇರಿಸಿ, ಒಬ್ಬರೇ ಶಿಕ್ಷಕರು ಪಾಠ ಬೋಧನೆ ಮಾಡಬೇಕು. ಒಂದು ನಲಿ– ಕಲಿ ತರಗತಿಯಲ್ಲಿ ಕನಿಷ್ಠ 50 ಮಕ್ಕಳು ಕೂರುತ್ತಾರೆ. ಶಿಕ್ಷಕ ಪ್ರತೀ ತರಗತಿಯ ಮಕ್ಕಳ ಮನೋಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಲು ಸಾಧ್ಯವೇ?

ಒಬ್ಬ ಶಿಕ್ಷಕ ಇಡೀ ದಿನ ನಲಿ– ಕಲಿ ತರಗತಿಗಳಿಗೆ ಮಾತ್ರ ಬೋಧಿಸುತ್ತಿದ್ದರೆ ಆ ಶಿಕ್ಷಕರ ಜ್ಞಾನವಲಯ ವಿಸ್ತಾರಗೊಳ್ಳುವುದಾದರೂ ಹೇಗೆ? ಶೈಕ್ಷಣಿಕ ವ್ಯವಸ್ಥೆಯ ಅಳತೆಗೋಲುಗಳಾದ ವೈಯಕ್ತಿಕ ಭಿನ್ನತೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುರುತಿಸುವಿಕೆ, ತಿದ್ದುವಿಕೆಗಳಿಗೆ ಅವಕಾಶವಾದರೂ ಎಲ್ಲಿ? ಈ ವ್ಯವಸ್ಥೆಯಿಂದ ಶಿಕ್ಷಕ– ವಿದ್ಯಾರ್ಥಿಗಳಿಬ್ಬರಿಗೂ ಪ್ರಯೋಜನವಿಲ್ಲ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT