ADVERTISEMENT

ಪೊಲೀಸರ ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:00 IST
Last Updated 29 ನವೆಂಬರ್ 2018, 20:00 IST

‘ಅಂಬರೀಷ್‌ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರೆ ನಿಮ್ಮ ಮೇಲೆ ಹಲ್ಲೆಯಾಗಬಹುದು’ ಎಂದು ಗುಪ್ತಚರ ವಿಭಾಗ ರಮ್ಯಾಗೆ ಎಚ್ಚರಿಕೆ ನೀಡಿರುವುದು ವರದಿಯಾಗಿದೆ.

ತಾನು ಮೂಳೆಗೆ ಸಂಬಂಧಿಸಿದ ಯಾವುದೋ ಕಾಯಿಲೆಗೆ ತುತ್ತಾಗಿರುವ ಕಾರಣ, ಓಡಾಟ ನಡೆಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದ್ದರಿಂದ ಬರಲಾಗುತ್ತಿಲ್ಲ ಎಂದು ರಮ್ಯಾ ಅವರೂ ಟ್ವೀಟ್ ಮಾಡಿದ್ದಾರೆ.

ಹೆಣ್ಣಾದವಳು ವಿವರಿಸಲಾಗದ ಯಾವುದೇ ಶಾರೀರಿಕ ತೊಂದರೆಯಿಂದ ಬಳಲಬಹುದು. ಅದನ್ನೆಲ್ಲ ಬಹಿರಂಗವಾಗಿ ವಿವರಿಸಬೇಕಾದ ಅಥವಾ ಮರೆಮಾಚಬೇಕಾದ ಸಂದರ್ಭವನ್ನು ಆಕೆಗೆ ಸೃಷ್ಟಿಸುವುದು ಅಸೂಕ್ಷ್ಮತೆ ಮತ್ತು ಅಸಭ್ಯತೆಯಾಗುತ್ತದೆ.

ADVERTISEMENT

ಅಂತಿಮ ಯಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸ್ ಇಲಾಖೆಯು ಕೆಎಸ್‌ಆರ್‌ಪಿ, ನಗರ ಸಶಸ್ತ್ರ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸೇರಿದಂತೆ ವಿವಿಧ ವಿಭಾಗಗಳ ಸಾವಿರಾರು ಸಿಬ್ಬಂದಿಯ ನೆರವು ಪಡೆದಿತ್ತು.

ರ‍್ಯಾಪಿಡ್‌ ಇಂಟರ್‌ವೆನ್‌ಶನ್‌ ವೆಹಿಕಲ್ಸ್‌ (ಆರ್‌ಐವಿ) ನಿಯೋಜಿಸಲಾಗಿತ್ತು. ಇಷ್ಟೆಲ್ಲ ಬಲವಿರುವ ಪೊಲೀಸ್ ಇಲಾಖೆಗೆ, ರಮ್ಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದವರನ್ನು ಮಟ್ಟ ಹಾಕುವುದು ಹಾಗಿರಲಿ, ಕೊನೆಯ ಪಕ್ಷ ಅಂತಿಮ ದರ್ಶನಕ್ಕೆ ಬರಲಿದ್ದ ಒಬ್ಬಳು ಹೆಣ್ಣುಮಗಳಿಗೆ ರಕ್ಷಣೆ ಕೊಡಲು ಆಗುತ್ತಿರಲಿಲ್ಲವೇ? ‘ನಿಮ್ಮ ಮೇಲೆ ಹಲ್ಲೆ ನಡೆಯಬಹುದು, ಇಲ್ಲಿಗೆ ಬರಲೇಬೇಡಿ’ ಎಂದು ಮುನ್ನೆಚ್ಚರಿಕೆಯಾಗಿ ಸಲಹೆ ನೀಡಿದರೆ ಅದನ್ನು ಜಾಣತನವೆನ್ನುವುದೋ, ಅಸಹಾಯಕತೆ ಎನ್ನುವುದೋ ಅಥವಾ ಹೇಡಿತನವೆನ್ನುವುದೋ ತಿಳಿಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.