ADVERTISEMENT

ಉದ್ಯೋಗ ಖಾತರಿಯಿಂದ ‘ಹಸಿರು ಖಾತರಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:52 IST
Last Updated 23 ಡಿಸೆಂಬರ್ 2018, 19:52 IST

ಬರಪೀಡಿತ ಪ್ರದೇಶಗಳಲ್ಲಿ ಬಡಜನರ ಗುಳೆ ತಡೆಯಲು ನಡೆಯುತ್ತಿರುವ ‘ಉದ್ಯೋಗ ಖಾತರಿ, ಬದುಕು ಖಾತರಿ’ ಅಭಿಯಾನ ಶ್ಲಾಘನೀಯ. ‘ಹಸಿರು ಖಾತರಿ’ ಎಂಬುದು ಹಸಿರು ಕ್ರಾಂತಿಗೆ ದಾರಿ ತೆಗೆದರೆ ಬರಗಾಲದ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಬಹುದು.

ನಮ್ಮ ಚಿಂತನೆಗಳು ಬದಲಾಗಬೇಕಾದುದು ಇಂದಿನ ಅಗತ್ಯ. ಜನರ ಮನಸ್ಸನ್ನು ಪರಿವರ್ತಿಸುವ, ಜನರಲ್ಲಿ ಜಾಗೃತಿ ಮೂಡಿಸುವಂತಹ ‘ಹಸಿರು ಖಾತರಿ’ ಚಿಂತನೆಯು ಜನರಿಂದಲೇ ಮೂಡಿ ಬಂದಾಗ ಬದಲಾವಣೆ ಖಂಡಿತ ಸಾಧ್ಯವಿದೆ. ಮಳೆ– ಬೆಳೆ ಇಲ್ಲದ, ಬರಗಾಲದ ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಪರಿಸರವನ್ನು ಹಾಳು ಮಾಡಿದ್ದೇವೆ. ಇವೆಲ್ಲ ಇನ್ನಾದರೂ ನಮಗೆ ಅರ್ಥವಾಗಲಿ.

-ಗೋಡೆ ಶಿವರಾಜ್ ಶಿರಿಗೇರಿ, ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.